ಮೂಡಲಗಿ:ಮೂಡಲಗಿಯಲ್ಲಿ ಉಪ ನೋಂದಣಿ ಕಚೇರಿ ಆರಂಭಿಸಲು ಸ್ಥಳ ಪರಿಶೀಲಿಸಿ ಡಿಆರ್ ಅಪರಂಜಿ ಮತ್ತು ಎಸಿ ಬಗಲಿ.
ಮೂಡಲಗಿಯಲ್ಲಿ ಉಪ ನೋಂದಣಿ ಕಚೇರಿ ಆರಂಭಿಸಲು ಸ್ಥಳ ಪರಿಶೀಲಿಸಿ ಡಿಆರ್ ಅಪರಂಜಿ ಮತ್ತು ಎಸಿ ಬಗಲಿ.
ನಮ್ಮ ಬೆಳಗಾವಿ ಇ.- ವಾರ್ತೆ, ಮೂಡಲಗಿ ಫೆ 9 –
ಮೂಡಲಗಿಗೆ ಹೊಸ ಉಪ ನೋಂದಣಿ ಕಛೇರಿ ಮಂಜೂರಾದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಬುಧವಾರದಂದು ಕಛೇರಿಗೆ ಅಗತ್ಯವಿರುವ ಸ್ಥಳವನ್ನು ಪರಿಶೀಲನೆ ನಡೆಸಿದರು.
ಪಟ್ಟಣದ ತಹಶಿಲ್ದಾರರ ಕಚೇರಿಗೆ ಹೊಂದಿಕೊಂಡಿರುವ ಮೂರು ಕೊಠಡಿಗಳನ್ನು ಪರಿಶೀಲಿಸಿದ ಜಿಲ್ಲಾ ನೋಂದಣಿ ಅಧಿಕಾರಿ ಶಿವಕುಮಾರ ಅಪರಂಜಿ ಅವರು, ಈ ಮೂರು ಕೊಠಡಿಯಲ್ಲಿ ಹೊಸ ಉಪ ನೋಂದಣಿ ಕಚೇರಿಯನ್ನುಆರಂಭಿಸಲಾಗುವುದು. ಶೀಘ್ರವಾಗಿ ಮೂಡಲಗಿಯಲ್ಲಿ ಕಚೇರಿ ಆರಂಭ ಮಾಡಲಾಗುವುದು ಎಂದು ಹೇಳಿದರು.
ಅರಭಾವಿ ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದ ಫಲವಾಗಿ ಮೂಡಲಗಿಯಲ್ಲಿ ಹೊಸ ಕಚೇರಿ ಆರಂಭವಾಗಲಿದೆ. ಮೂಡಲಗಿ ತಾಲೂಕಿನ ಸಾರ್ವಜನಿಕರ ಹಿತದೃಷ್ಟಿಯಿಂದ ಗೋಕಾಕದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನೇ ಇಲ್ಲಿ ತಾತ್ಕಾಲಿಕವಾಗಿ ನಿಯೋಜನೆ ಮಾಡಲಾಗುತ್ತದೆ.ನಾಗರೀಕರು ಹಾಗೂ ರೈತರಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಬೈಲಹೊಂಗಲ ಉಪ-ವಿಭಾಗಾಧಿಕಾರಿ ಡಾ. ಶಶಿಧರ ಬಗಲಿ, ತಹಶಿಲ್ದಾರ ಡಿ.ಜೆ ಮಹಾತ, ಗೋಕಾಕ ಉಪ ನೋಂದಣಿ ಅಧಿಕಾರಿ ರವಿ ಸಂಕನಗೌಡ್ರ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹಾಗೂ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಫೋಟೋ- ಮೂಡಲಗಿಗೆ ಉಪ ನೋಂದಣಿ ಕಛೇರಿ ಮಂಜೂರಾದ ಹಿನ್ನೆಲೆಯಲ್ಲಿ ಜಿಲ್ಲಾ ನೋಂದಣಿ ಅಧಿಕಾರಿ ಶಿವಕುಮಾರ ಅಪರಂಜಿಯವರು ಇಲ್ಲಿನ ತಹಶಿಲ್ದಾರರ ಕಚೇರಿಗೆ ತೆರಳಿ ಸ್ಥಳ ಪರಿಶೀಲನೆ ಮಾಡಿದರು.
ಬೈಲಹೊಂಗಲ ಎಸಿ ಡಾ. ಬಗಲಿ, ಗೋಕಾಕ್ ಉಪ ನೋಂದಣಿ ಅಧಿಕಾರಿ ಸಂಕನಗೌಡ್ರ, ನಾಗಪ್ಪ ಶೇಖರಗೋಳ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.