RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ನಾಳೆ ಗೋಕಾಕ ತಾಲೂಕಾ ಪತ್ರಕರ್ತರ ಸಂಘ (ರಿ) ಉದ್ಘಾಟನೆ

ಗೋಕಾಕ:ನಾಳೆ ಗೋಕಾಕ ತಾಲೂಕಾ ಪತ್ರಕರ್ತರ ಸಂಘ (ರಿ) ಉದ್ಘಾಟನೆ 

ನಾಳೆ ಗೋಕಾಕ ತಾಲೂಕಾ ಪತ್ರಕರ್ತರ ಸಂಘ (ರಿ) ಉದ್ಘಾಟನೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 5 :

 

ಗೋಕಾಕ ತಾಲೂಕಾ ಪತ್ರಕರ್ತರ ಸಂಘ (ರಿ) ಗೋಕಾಕ ಇದರ ಉದ್ಘಾಟನಾ ಸಮಾರಂಭ ಗೋಕಾಕ ತಾಪಂ ಸಭಾ ಭವನದಲ್ಲಿ ದಿ.06 ರಂದು ಮುಂಜಾನೆ 10ಗಂಟೆಗೆ ಜರುಗಲಿದೆ ಎಂದು ಸಂಘದ ಅಧ್ಯಕ್ಷ ಮನೋಹರ ಮೇಗೇರಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ, ಕುಂದರಗಿ ಅಡವಿಸಿದ್ಧೇಶ್ವರ ಮಠದ ಶ್ರೀ ಅಮರೇಶ್ವರ ಸ್ವಾಮಿಜಿ ವಹಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರಮೇಶ ಜಾರಕಿಹೊಳಿ ವಹಿಸುವರು. ಉದ್ಘಾಟನೆಯನ್ನು ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೆರವೆರಿಸುವರು. ಮುಖ್ಯತಿಥಿಗಳಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭೀಮಶಿ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಆಗಮಿಸುವರು.
ಕಾರ್ಯಕ್ರಮಕ್ಕೆ ಪತ್ರಕರ್ತರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಂಘದ ಅಧ್ಯಕ್ಷ ಮನೋಹರ ಮೇಗೇರಿ ಕೋರಿದ್ದಾರೆ.

Related posts: