RNI NO. KARKAN/2006/27779|Wednesday, January 14, 2026
You are here: Home » breaking news » ಗೋಕಾಕ:ದಿ. 25 ರಂದು ರೋಟರಿ ಸಂಸ್ಥೆಯ 2021-22 ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭ

ಗೋಕಾಕ:ದಿ. 25 ರಂದು ರೋಟರಿ ಸಂಸ್ಥೆಯ 2021-22 ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭ 

ದಿ. 25 ರಂದು ರೋಟರಿ ಸಂಸ್ಥೆಯ 2021-22 ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ 23 :

ಇಲ್ಲಿನ ರೋಟರಿ ಸಂಸ್ಥೆಯ 2021-22 ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭವು ದಿ. 25 ರವಿವಾರ ಮುಂಜಾನೆ ನಗರದ ರೋಟರಿ ರಕ್ತ ಭಂಡಾರದ ಡಾ.ಬಿ.ಸಿ ಆಜರೆ ಮೆಮೋರಿಯಲ್ ಸಭಾಂಗಣದಲ್ಲಿ ಜರುಗಲಿದೆ

ಈ ಸಮಾರಂಭದ ಸಾನಿಧ್ಯವನ್ನು ಘೋಡಗೇರಿಯ ಮಲ್ಲಯ್ಯ ಮಹಾಸ್ವಾಮಿಗಳು ವಹಿಸುವರು. ಹಸ್ತಾಂತರ ಆಧಿಕಾರಿಯಾಗಿ ಜಿಲ್ಲಾ ಸಹಾಯಕ ಪ್ರಾಂತಪಾಲ ದಿನೇಶ ಕಾಳೆ, ಮುಖ್ಯ ಅತಿಥಿಗಳಾಗಿ ಬೆಳಗಾವಿಯ ಇನರ್ ವ್ಹೀಲ್ ಸಂಸ್ಥೆಯ ಮಾಜಿ ಅಧ್ಯಕ್ಷೆ ಶರ್ಮಿಳಾ ಕೋರೆ ಆಗಮಿಸಲಿದ್ದಾರೆ. ನೂತನ ಅಧ್ಯಕ್ಷರಾಗಿ ಗಣೇಶ ವರದಾಯಿ, ಕಾರ್ಯದರ್ಶಿಯಾಗಿ ದಿಲೀಪ್ ಮೆಳವಂಕಿ, ಖಜಾಂಚಿಯಾಗಿ ಕೆಂಚಪ್ಪ ಭರಮನ್ನವರ, ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದ್ದು, ಈ ಕಾರ್ಯಕ್ರಮಕ್ಕೆ ಸದಸ್ಯರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಾಲ್ಗೋಳಬೇಕೆಂದು ಅಧ್ಯಕ್ಷ ವಿಶ್ವನಾಥ್ ಕಡಕೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts: