ಗೋಕಾಕ:ದಿ.27 ರಂದು 2021-22 ನೇ ಸಾಲಿಗೆ 6 ನೇ ತರಗತಿಯ ಪ್ರವೇಶ ಪರೀಕ್ಷೆ : ಬಿಇಒ ಬಳಗಾರ ಮಾಹಿತಿ
ದಿ.27 ರಂದು 2021-22 ನೇ ಸಾಲಿಗೆ 6 ನೇ ತರಗತಿಯ ಪ್ರವೇಶ ಪರೀಕ್ಷೆ : ಬಿಇಒ ಬಳಗಾರ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 23 :
ತಾಲ್ಲೂಕಿನ ಖನಗಾಂವ ಗ್ರಾಮದ ಸರಕಾರಿ ಆದರ್ಶ ವಿದ್ಯಾಲಯಕ್ಕೆ 2021-22 ನೇ ಸಾಲಿಗೆ 6 ನೇ ತರಗತಿಯ ಪ್ರವೇಶ ಪರೀಕ್ಷೆಯನ್ನು ದಿ.27 ರಂದು ಬೆಳಿಗ್ಗೆ 10:30 ರಿಂದ 1 ಘಂಟೆಯ ವರೆಗೆ ನಗರದ 14 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಅರ್ಜಿ ಸಲ್ಲಿಸಿದವರು ಪರೀಕ್ಷೆ ಹಾಜರಾಗಬೇಕು ಹೆಚ್ಚಿನ ಮಾಹಿತಿಗೆ ಮುಖ್ಯ ಶಿಕ್ಷಕ ವಾಯ್.ಎಚ್.ಭಂಜತ್ರಿ ಮೋ .ಸಂಖ್ಯೆ 9448630032 ಗೆ ಸಂರ್ಪಕಿಸಲು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ