ಗೋಕಾಕ:ಗೌರಿ ಲಂಕೇಶ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂದಿಸುವಲ್ಲಿ ವಿಳಂಬ ನೀತಿ : ಕರ್ನಾಟಕ ರಣಧೀರ ಪಡೆ ಆಕ್ರೋಶ
ಗೌರಿ ಲಂಕೇಶ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂದಿಸುವಲ್ಲಿ ವಿಳಂಬ ನೀತಿ : ಕರ್ನಾಟಕ ರಣಧೀರ ಪಡೆ ಆಕ್ರೋಶ
ಗೋಕಾಕ ಸೆ 14 : ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂದಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಸರಿಯಲ್ಲ ಆದಷ್ಟು ಬೇಗ ಹಂತಕರನ್ನು ಬಂದಿಸಿ ಗೌರಿ ಲಂಕೇಶ ಅವರ ಕುಟುಂಬಕ್ಕೆ ನ್ಯಾಯವದಗಿಸಿ ಕೋಡಬೇಕೆಂದು ಕರ್ನಾಟಕ ರಣಧೀರ ಪಡೆ ತಾಲೂಕಾಧ್ಯಕ್ಷ ನಿತ್ಯಾನಂದ ಅಮ್ಮಿನಭಾಂವಿ ಹೇಳಿದರು.
ಅವರು, ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂದಿಸುವಂತೆ ಆಗ್ರಹಿಸಿ ಕರ್ನಾಟಕ ರಣಧೀರ ಪಡೆ ಕಾರ್ಯಕರ್ತರು ತಹಶೀಲ್ದಾರ ಮುಖಾಂತರ ಸಿಎಂ ಅವರಿಗೆ ಮನವಿ ಅರ್ಪಿಸಿ ಮಾತನಾಡಿ, ವಿಚಾರವಾದಿ, ಸಾಹಿತಿ, ಹಿರಿಯ ಪತ್ರಕರ್ತೆ ಹಾಗೂ ದಿಟ್ಟ ಹೋರಾಟಗಾರ್ತಿ ಗೌರಿ ಲಂಕೇಶ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ಸ್ವಗೃಹದಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿರುವುದು ಹೇಯ ಕೃತ್ಯ. ವೈಚಾರಿಕ ವೈರುಧ್ಯಗಳು ಸಹಜ ಆದರೆ ವ್ಯಕ್ತಿಯ ಹತ್ಯೆ ಮಾಡುವದು ನ್ಯಾಯವಲ್ಲ್ಲ. ಪರಸ್ಪರರ ನಡುವೆ ಭಿನ್ನಾಭಿಪ್ರಾಯ ಇದ್ದದ್ದೆ. ಹಾಗಂತ ಅವುಗಳನ್ನೇ ದ್ವೇಷವನ್ನಾಗಿಸಿಕೊಂಡು ಹತ್ಯೆ ಮಾಡಿರುವದು ಖಂಡನೀಯ.
ಸಂಶೋದಕ ಎಮ್ ಎಮ್ ಕಲಬುರ್ಗಿ, ಗೌರಿ ಲಂಕೇಶ ಹಂತಕರು ಬಳಕೆ ಮಾಡಿದ ಪಿಸ್ತೂಲ್ ಒಂದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ರಾಜ್ಯದಲ್ಲಿ ರಾಜಾರೋಷವಾಗಿ ಕೊಲೆ ಗೈಯುವ ಪಾಪಿಗಳನ್ನು ಬಂದಿಸಿ ಕಠೀಣ ಶಿಕ್ಷೆ ನೀಡಬೇಕು. ಅಷ್ಟೇಯಲ್ಲದೇ ಪತ್ರಕರ್ತರ ಮೇಲೆ ಪದೆ ಪದೆ ಹಲ್ಲೆಗಳಾಗುತ್ತಿದ್ದು ಸರಕಾರ ಪತ್ರಕರ್ತರ ಹಾಗೂ ಪ್ರಗತಿಪರ ಚಿಂತಕರ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಚೀನ ವಾಳ್ವೇಕರ, ನ್ಯಾಯವಾದಿ ಸುರೇಶ ಭಜಂತ್ರಿ, ದುಂಡಪ್ಪ ನಂದಿ, ಹಿತೇಶ ರಾಠೋಡ, ಬಂಗೆಪ್ಪ ಬಂಗೇನ್ನವರ, ಉದಯ ಬುರ್ಜಿ, ತಾಹೀರ ಪೀರಜಾದೆ, ಹಫೀಜ್ ಆಯಟ್ಟಿ, ಸಿದ್ದರಾಮ ಖನಗಾರ, ಚಿದಾನಂದ ಗೌಡರ, ಸಮೀರ ಮುಲ್ಲಾ, ಯಲ್ಲಪ್ಪ ಭಜಂತ್ರಿ, ನಿಂಗಪ್ಪ ತಿಗಡಿ, ಉದಯ ಹುಣಶ್ಯಾಳ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.