ಗೋಕಾಕ:ಸರಕಾರದ ಮಾರ್ಗ ಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೀಲ್ಡಗಿಳಿದ ತಹಶೀಲ್ದಾರ
ಸರಕಾರದ ಮಾರ್ಗ ಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೀಲ್ಡಗಿಳಿದ ತಹಶೀಲ್ದಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 10 :
ರಾಜ್ಯದಲ್ಲಿ ಜನತಾ ಕರ್ಪ್ಯೂ ನಂತರ ಎರಡನೇ ಹಂತದ ಸೆಮಿ ಲಾಕಡೌನ ಜಾರಿಯಾಗಿದ್ದು , ಸರಕಾರದ ಮಾರ್ಗ ಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಅವರೇ ಸೋಮವಾರದಂದು ಬೆಳ್ಳಂಬೆಳಗ್ಗೆ ಫೀಲ್ಡ್ ಗೆ ಇಳಿದು ಅಗತ್ಯ ವಸ್ತುಗಳಲ್ಲದ ದಿಲ್ಲಿ ಪ್ಲಾಜಾ, ದಿಲ್ಲಿ ಎನ್. ಎಕ್ಸ್ , ಮೋರ, ರಿಲಾಯನ್ಸ ಸೇರಿದಂತೆ ಇನ್ನೀತರ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಿದ್ದಾರೆ.
ಮಂಜಾನೆ ನಗರಸಭೆ ಅಧಿಕಾರಿ ಮತ್ತು ಪೊಲೀಸ ಅಧಿಕಾರಿಗಳ ಜೊತೆ ನಗರ ಪ್ರದಕ್ಷಣಿ ನಡೆಸಿದ ಪ್ರಕಾಶ ಹೋಳೆಪ್ಪಗೋಳ ಸಾರ್ವಜನಿಕರಿಗೆ ಕೊರೋನಾ ತಡೆಯಲು ಸರಕಾರ ಹೊರಡಿಸಿರುವ ಮಾರ್ಗ ಸೂಚಿಗಳನ್ನು ಸರಿಯಾಗಿ ಪಾಲಿಸಿ ಸಹಕರಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಅನಗತ್ಯವಾಗಿ ತೆರೆದಿರುವ ಮೋರ್, ದಿಲ್ಲಿ ಪ್ಲಾಜಾ, ದಿಲ್ಲಿ ಎನ್.ಎಕ್ಸ, ರಿಲಾಯನ್ಸ ಅಂಗಡಿಗಳ ಮೇಲೆ ದಾಳಿ ನಡೆಯಿಸಿ ದಂಡ ವಿಧಿಸಿದರು