RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ರಾಮ ರಾಜ್ಯವಾಗಲು ಎಲ್ಲರೂ ಶ್ರೀರಾಮನ ಆದರ್ಶಗಳನ್ನು ಆಚರಣೆಗೆ ತರಬೇಕು : ಅರವಿಂದರಾವ್ ದೇಶಪಾಂಡೆ

ಗೋಕಾಕ:ರಾಮ ರಾಜ್ಯವಾಗಲು ಎಲ್ಲರೂ ಶ್ರೀರಾಮನ ಆದರ್ಶಗಳನ್ನು ಆಚರಣೆಗೆ ತರಬೇಕು : ಅರವಿಂದರಾವ್ ದೇಶಪಾಂಡೆ 

ರಾಮ ರಾಜ್ಯವಾಗಲು ಎಲ್ಲರೂ ಶ್ರೀರಾಮನ ಆದರ್ಶಗಳನ್ನು ಆಚರಣೆಗೆ ತರಬೇಕು : ಅರವಿಂದರಾವ್ ದೇಶಪಾಂಡೆ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 7 :

 
ರಾಮ ರಾಜ್ಯವಾಗಲು ಎಲ್ಲರೂ ಶ್ರೀರಾಮನ ಆದರ್ಶಗಳನ್ನು ಆಚರಣೆಗೆ ತರುವ ಮೂಲಕ ಶ್ರೀರಾಮನಂತಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸಂಚಾಲಕ ಅರವಿಂದರಾವ್ ದೇಶಪಾಂಡೆ ಹೇಳಿದರು.
ಭಾನುವಾರ ಇಲ್ಲಿನ ಕೆಎಲ್‍ಇ ಪ್ರೌಢಶಾಲಾ ಆವರಣದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ನಿಮಿತ್ಯ ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ಸಮರಸತಾ ಯಾತ್ರೆ ಹಾಗೂ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಮಂದಿರದಲ್ಲಿ ಶ್ರೀರಾಮ ಮೂರ್ತಿ ಇರಬೇಕು. ಶ್ರೀರಾಮನ ಆದರ್ಶಗಳು ಎಲ್ಲರ ಹೃದಯದಲ್ಲಿರಬೇಕು. ಇದನ್ನು ಕಾರ್ಯ ರೂಪಕ್ಕೆ ತರಲು ನಾವೆಲ್ಲ ಕಾರ್ಯ ಪ್ರವೃತ್ತರಾಗಬೇಕು. ನಿಧಿ ಸಮರ್ಪಣಾ ಅಭಿಯಾನದ ಮೂಲಕ ಮಂದಿರಕ್ಕಾಗಿ ಶ್ರಮಿಸಿದ ಇತಿಯಾಸವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಿ ಅವರಲ್ಲಿ ಹಿಂದೂ ಜಾಗೃತಿ ಮೂಡಿಸುವ ಹಾಗೂ ದೇಶದ ಪ್ರತಿಯೊಬ್ಬರಿಗೂ ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿತ್ತು. ಅದು ನಿರೀಕ್ಷೆಗೂ ಮೀರಿ ಯಶಸ್ಸು ನೀಡಿದೆ ಎಂದು ಹೇಳಿದರು.
ಶ್ರೀರಾಮ ಮತ್ತು ಶ್ರೀಕೃಷ್ಣರು ಕಾಲ್ಪನಿಕ ವ್ಯಕ್ತಿಗಳಲ್ಲ. ಅವರು ಇತಿಹಾಸ ಪುರಷರೆಂದು ಇತಿಹಾಸ ಸಂಶೋಧಕರಿಂದ ದೃಢಪಟ್ಟಿದೆ. ಅಸ್ತಿತ್ವ ಹಾಗೂ ಅಂತ್ಯವೇ ಅವರಾಗಿದ್ದಾರೆ. ರಾಮಾಯಣ ಮತ್ತು ಮಹಾಭಾರತ ಸರ್ವ ಮೌಲ್ಯಗಳನ್ನು ಒಳಗೊಂಡು ಜಗತ್ತಿಗೇ ದಾರಿದೀಪವಾಗಿವೆ. ಇತಿಹಾಸದ ಮಾಹಿತಿಯನ್ನು ನಾವಿಂದು ಮಕ್ಕಳಿಗೆ ನೀಡಿ ಅವರನ್ನು ಸಂಸ್ಕಾರವಂತರನ್ನಾಗಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಇದಕ್ಕೂ ಪೂರ್ವದಲ್ಲಿ ನಗರದ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಪೀಠದ ಆವರಣದಲ್ಲಿ ಸಮರಸತಾ ಯಾತ್ರೆಗೆ ಶೂನ್ಯ ಸಂಪಾದನಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮಜಿ ಚಾಲನೆ ನೀಡಿದರು.
ವೇದಿಕೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಶೂನ್ಯ ಸಂಪಾದನಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ, ದಯಾನಂದ ಸ್ವಾಮೀಜಿ, ಚಿದಾನಂದ ಸ್ವಾಮೀಜಿ, ಭೀಮಾನಂದ ಸ್ವಾಮೀಜಿ, ಬಸವರಾಜ ಸ್ವಾಮೀಜಿ, ಬಾಳಯ್ಯ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಹರಿಹರಾನಂದ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಆರ್.ಎಸ್.ಎಸ್. ಜಿಲ್ಲಾ ಸಂಘನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಚುನಮರಿ, ಗಣ್ಯರಾದ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ನಾರಾಯಣ ಮಠಾಧಿಕಾರಿ, ಎಂ.ವೈ.ಹಾರೂಗೇರಿ, ಸರ್ವೋತ್ತಮ ಜಾರಕಿಹೊಳಿ, ವೆಂಕಟೇಶ ದೇಶಪಾಂಡೆ, ವಿಜಯಕುಮಾರ ಖಾರೇಪಾಠಣ, ಸದಾಶಿವ ಗುದಗ್ಗಗೋಳ, ಮಹಾಂತೇಶ ತಾಂವಶಿ, ಮಲ್ಲಿಕಾರ್ಜುನ ಈಟಿ, ಘಟಪ್ರಭಾದ ಸುರೇಶ ಪಾಟೀಲ, ಕೃಷ್ಣಾ ಕುರುಬಗಟ್ಟಿ, ಮೊದಲಾದವರು ಇದ್ದರು.

 

Related posts: