RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಸ್ವಚ್ಛತೆ ಇರುವ ಕಡೆ ದೇವರು ನೆಲೆಸಿರುತ್ತಾರೆ : ಸೋಮಶೇಖರ್ ಮಗದುಮ್ಮ

ಗೋಕಾಕ:ಸ್ವಚ್ಛತೆ ಇರುವ ಕಡೆ ದೇವರು ನೆಲೆಸಿರುತ್ತಾರೆ : ಸೋಮಶೇಖರ್ ಮಗದುಮ್ಮ 

ಸ್ವಚ್ಛತೆ ಇರುವ ಕಡೆ ದೇವರು ನೆಲೆಸಿರುತ್ತಾರೆ : ಸೋಮಶೇಖರ್ ಮಗದುಮ್ಮ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 9 :

 

ಸ್ವಚ್ಛತೆ ಇರುವ ಕಡೆ ದೇವರು ನೆಲೆಸಿರುತ್ತಾರೆ ಭತರಖಂಡವನ್ನೇ ಸ್ವಚ್ಛತೆಗೋಳಿಸಿ ದೇವಾಲಯವನ್ನಾಗಿ ಮಾಡೋಣಾ ಎಂದು ಜಿಲ್ಲಾ ಜನಜಾಗೃತಾ ಸಂಸ್ಥಾಪಕ ಅಧ್ಯಕ್ಷ ಸೋಮಶೇಖರ್ ಮಗದುಮ್ಮ ಹೇಳಿದರು

ಶನಿವಾರದಂದು ನಗರದ ಹೊರವಲಯದಲ್ಲಿರುವ ಗಾಂಧಿ ಸ್ಮಾರಕ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್, ಜನಜಾಗೃತಾ ವೇದಿಕೆ ಬೆಳ್ತಂಗಡಿ , ರೋಟರಿ , ನಗರಸಭೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಾಹನಾ ಕಾರ್ಯಕ್ರಮದಡಿ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಗಾಂಧಿಜೀಯವರ ಸ್ವಚ್ಛ ಭಾರತದ ಕನಸನ್ನು ನನಸಾಗಿಸಲು ನಾವೆಲ್ಲ ಶ್ರಮಿಸೋಣಾ ಎಂದರು

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡುತ್ತಾ ಪರಿಸರವನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡುವ ಕಾರ್ಯವನ್ನು ಮಾಡಬೇಕಾಗಿದೆ. ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪರಿಸರ ರಕ್ಷಣೆ ಕಾರ್ಯಕ್ರಮಗಳನ್ನು ಮಾಡುತಾ ಜನರಲ್ಲಿ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಕಳೆದ 5 ವರ್ಷಗಳಿಂದ ಗ್ರಾಮ ಹಾಗೂ ಎಲ್ಲ ಸಮುದಾಯಗಳ ಶ್ರದ್ದಾ ಕೇಂದ್ರಗಳನ್ನು ಸ್ವಚ್ಛಗೋಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದಿ.7 ರಿಂದ 14 ರವರೆಗೆ 91 ಶ್ರದ್ದಾ ಕೇಂದ್ರಗಳ ಆವರಣಗಳನ್ನು ಸ್ವಚ್ಛಗೋಳಿಸುವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ ಇದಕ್ಕೆ ಎಲ್ಲರು ಸಹಕಾರ ನೀಡುವಂತೆ ಕೋರಿದರು.

ಈ ಸಂದರ್ಭದಲ್ಲಿ ಯೋಜನಾಧಿಕಾರಿಗಳಾದ ನಾಗೇಶ , ಮಮತಾ , ರೋಟರಿ ಅಧ್ಯಕ್ಷ ವಿಶ್ವನಾಥ್ ಕಡಕೋಳ , ಪದಾಧಿಕಾರಿಗಳಾದ ರಾಜು ವರದಾಯಿ, ಮಲ್ಲಿಕಾರ್ಜುನ ಕಲ್ಲೋಳಿ , ನರಗಸಭೆಯ ಕೆ.ಎಸ್ ಕೋಳಿ, ಅರಣ್ಯ ಇಲಾಖೆಯ ಎಚ್.ಜಿ ಹಂಮನ್ನವರ , ಮಹಾಂತೇಶ ಜಾಮುನಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಾಹಣಾ ತಂಡದವರು ಇದ್ದರು

Related posts: