RNI NO. KARKAN/2006/27779|Wednesday, January 14, 2026
You are here: Home » breaking news » ಗೋಕಾಕ:ವಾರ್ಷಿಕ ಸರ್ವಸಾಧಾರಣ ಮಹಾಸಭೆ : ಬೆಟಗೇರಿ ಪಿಕೆಪಿಎಸ್‍ಗೆ 30.26 ಲಕ್ಷ ರೂಪಾಯಿ ಲಾಭ

ಗೋಕಾಕ:ವಾರ್ಷಿಕ ಸರ್ವಸಾಧಾರಣ ಮಹಾಸಭೆ : ಬೆಟಗೇರಿ ಪಿಕೆಪಿಎಸ್‍ಗೆ 30.26 ಲಕ್ಷ ರೂಪಾಯಿ ಲಾಭ 

ವಾರ್ಷಿಕ ಸರ್ವಸಾಧಾರಣ ಮಹಾಸಭೆ : ಬೆಟಗೇರಿ ಪಿಕೆಪಿಎಸ್‍ಗೆ 30.26 ಲಕ್ಷ ರೂಪಾಯಿ ಲಾಭ

 
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಡಿ 3 :

 
ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2019-20ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಮಹಾಸಭೆ ಬುಧವಾರದಂದು ಸಂಘದ ಕಾರ್ಯಾಲಯದಲ್ಲಿ ನಡೆಯಿತು.
ಸಂಘದ ಮುಖ್ಯಕಾರ್ಯನಿರ್ವಾಹಕ ಅಡಿವೆಪ್ಪ ಮುರಗೋಡ ವಾರ್ಷಿಕ ವರದಿ ಮಂಡಿಸಿ ಮಾತನಾಡಿದ ಅವರು, ಸಂಘವು ಸನ್2019-20ನೇ ಸಾಲಿನಲ್ಲಿ ಸಂಘವು 11.69.90373ರೂ ಒಟ್ಟು ದುಡಿಯುವ ಬಂಡವಾಳ ಹೊಂದಿ, ಈಗ 21,76397ರೂ ನಿವ್ವಳ ಲಾಭ ಗಳಿಸಿದೆ. ಸಂಘದ ಶೇರು ಸದಸ್ಯರಿಗೆ ಶೇ10 ರಷ್ಟು ಡಿವ್ಹಿಡೆಂಡ್ ವಿತರಿಸಲಾಗುವದು ಎಂದು ತಿಳಿಸಿದರು.
ಸಂಘದ ಶೇರ ಸದಸ್ಯರು, ಗ್ರಾಹಕರು, ನಾಗರಿಕರ ಜೊತೆ ಆಡಳಿತ ಮಂಡಳಿ ಸದಸ್ಯರು ಸಂಘದ ಸಮಗ್ರ ಪ್ರಗತಿ, ಸಂಘದಿಂದ ದೊರಕುವ ವಿವಿಧ ಸಾಲ, ಸೌಲಭ್ಯಗಳ ಕುರಿತು ಚರ್ಚಿಸಿದರು. ಸಂಘದ ಅಧ್ಯಕ್ಷ ಚಂದ್ರಶೇಖರ ನೀಲಣ್ಣವರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರು, ಶೇರ ಸದಸ್ಯರು, ಗ್ರಾಹಕರು, ಸಂಘದ ಸಿಬ್ಬಂದಿ ವರ್ಗ, ಇತರರು ಇದ್ದರು. ಎ.ಎಮ್.ಮುರಗೋಡ ಸ್ವಾಗತಿಸಿದರು. ಮುತ್ತೆಪ್ಪ ದೇಯಣ್ಣವರ ನಿರೂಪಿಸಿದರು, ಮಹಾದೇವ ಕೋಣಿ ವಂದಿಸಿದರು.

Related posts: