RNI NO. KARKAN/2006/27779|Wednesday, May 20, 2026
You are here: Home » breaking news » ಗೋಕಾಕ:ಶಿಕ್ಷಕರ ದಿನಾಚಾರಣೆ ನಿಮಿತ್ಯ ಗೋಕಾಕ ವಲಯದ ಶಿಕ್ಷಕರಿಂದ ಬೃಹತ್ ರಕ್ತದಾನ, ನೇತ್ರದಾನ ಶಿಬಿರ

ಗೋಕಾಕ:ಶಿಕ್ಷಕರ ದಿನಾಚಾರಣೆ ನಿಮಿತ್ಯ ಗೋಕಾಕ ವಲಯದ ಶಿಕ್ಷಕರಿಂದ ಬೃಹತ್ ರಕ್ತದಾನ, ನೇತ್ರದಾನ ಶಿಬಿರ 

ಶಿಕ್ಷಕರ ದಿನಾಚಾರಣೆ ನಿಮಿತ್ಯ ಗೋಕಾಕ ವಲಯದ ಶಿಕ್ಷಕರಿಂದ ಬೃಹತ್ ರಕ್ತದಾನ, ನೇತ್ರದಾನ ಶಿಬಿರ
ಗೋಕಾಕ ಸೆ 5: ಸರ್ವಪಲ್ಲಿ ರಾಧಾಕೃಷ್ಣನ್ ಅವರ 130 ನೇ ಜನ್ಮದಿನದ ನಿಮಿತ್ಯ ಗೋಕಾಕ ವಲಯದ ಶಿಕ್ಷಕ , ಶಿಕ್ಷಕೀಯರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜಿ.ಬಿ.ಬಳಗಾರ ನೇತೃತ್ವದಲ್ಲಿಂದು ಬೃಹತ ರಕ್ತದಾನ , ಅನ್ನಸಂತರ್ಪಣೆ , ಬಡ ರೋಗಿಗಳಿಗೆ ಹಣ್ಣು ಹಂಫಲ ವಿತರಣೆ ಹಾಗೂ ನೇತ್ರದಾನ ಶಿಭಿರವನ್ನು ಏರ್ಪಡಿಸಿದ್ದರು

ಮಂಗಳವಾರ ಮುಂಜಾನೆ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಛೇರಿಯಲ್ಲಿ ಸೇರಿದ ಶಿಕ್ಷಕ ಮಿತ್ರರು ರಾಧಾಕೃಷ್ಣನ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕ ಆಸ್ಪತ್ರೆ ವರೆಗೆ ಮೆರವಣಿಗೆ ಮೂಲಕ ಸಾಗಿ ರಕ್ತದಾನವನ್ನು ಮಾಡಿದರು

ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಎಲ್ಲ ದಾನಗಳಲ್ಲಿ ಶೇಷ್ಠವಾಗಿರುವಂತ ರಕ್ತದಾನದಲ್ಲಿ ಮತ್ತು ನೇತ್ರದಾನ ದಲ್ಲಿ ಎಲ್ಲ ಶಿಕ್ಷಕ ಮಿತ್ರರು ಸ್ವಯಂ ಪ್ರೇರಣೆಯಿಂದ ಭಾಗವಹಿಸಿ ಒಂದು ಜೀವವನ್ನು ಉಳಿಸಲು ಕಾರಣಿಕೃತರಾಗಬೇಕೆಂದು ಮನವಿ ಮಾಡಿದರು .

ನೇತ್ರತಜ್ಞ ಡಾ.ರೋಹಿಣಿ ಅವರು ನೇತ್ರದಾನದಿಂದ ಆಗುವ ಲಾಭಗಳ ಬಗ್ಗೆ ತಿಳಿಸಿದರು

ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮುಖಾಂತರ ಉಧ್ಘಾಟಿಸುತ್ತಿರುವ ಗಣ್ಯರು

ಇದಕ್ಕೂ ಮೋದಲು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಗಣಪತಿ ದೇವಾಲಯದಲ್ಲಿ ನಡೆದ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮುಖೇನ ಉಧ್ಘಾಟಿಸಿಲಾಯಿತು

ಈ ಸಂದರ್ಭದಲ್ಲಿ ಭೀಮ್ಸನ ತಜ್ಞ ವೈದ್ಯ ಡಾ.ಎಸ್.ವಿ ಹೊಸಮಠ , ಡಾ. ಮಹೇಶ ಕೋಣಿ ,ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ನೇಗಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ಕಾರ್ಯಕ್ರಮದ ನಂತರ ಜರುಗಿದ ರಕ್ತದಾನದಲ್ಲಿ ಸೂಮಾರು 100 ಕ್ಕೂ ಹೆಚ್ಚು ಜನ ಶಿಕ್ಷಕ ,ಶಿಕ್ಷಕೀಯರು ರಕ್ತದಾನವನ್ನು ಮಾಡಿದರು . ಸುಮಾರು 35 ಕ್ಕೂ ಹೆಚ್ಚು ಜನ ಶಿಕ್ಷಕ , ಶಿಕ್ಷಕೀಯರು ನೇತ್ರದಾನ ಮಾಡಿದರು.ದೈಹಿಕ ಶಿಕ್ಷಕರಾದ ಶ್ರೀ ಮಾಮಿನಗಿಡದ ಮತ್ತು ಮಧಗುಣಕಿ ಅವರಿಂದ ರೋಗಿಗಳಿಗೆ ಅನ್ನಸಂತರ್ಪಣೆ ನೆರವೇರಿತು .

ಕಾರ್ಯಕ್ರವನ್ನು ಆರೋಗ್ಯ ಇಲಾಖೆಯ ಆರ್.ಜಿ.ಬಸ್ಸಾಪುರ ನಿರೂಪಿಸಿ ವಂದಿಸಿದರು

Related posts: