RNI NO. KARKAN/2006/27779|Tuesday, August 5, 2025
You are here: Home » breaking news » ಗೋಕಾಕ:ವಿಶ್ವಕರ್ಮನು ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ: ಶಿವರಾಜ ಪತ್ತಾರ

ಗೋಕಾಕ:ವಿಶ್ವಕರ್ಮನು ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ: ಶಿವರಾಜ ಪತ್ತಾರ 

ವಿಶ್ವಕರ್ಮನು ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ: ಶಿವರಾಜ ಪತ್ತಾರ

 
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಸೆ 17 :

 
ದೇವಶಿಲ್ಪಿ ವಿಶ್ವಕರ್ಮನು ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ. ಬ್ರಹ್ಮಾಂಡ ತುಂಬೆಲ್ಲಾ ವ್ಯಾಪಿಸಿದ್ದಾನೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿಶ್ವಕರ್ಮ ಸಮುದಾಯದ ಯುವ ಮುಖಂಡ ಶಿವರಾಜ ಪತ್ತಾರ ಹೇಳಿದರು.
ಗ್ರಾಮದ ವಿಶ್ವಕರ್ಮ ಸಮುದಾಯದ ವತಿಯಿಂದ ಸ್ಥಳೀಯ ಗ್ರಾಮ ದೇವತೆ ದ್ಯಾಮವ್ವದೇವಿ ದೇವಾಲಯದಲ್ಲಿ ಗುರುವಾರ ಸೆ.17 ರಂದು ನಡೆದ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಕರ್ಮ ಒಬ್ಬ ದೇವಶಿಲ್ಪಿಯಾಗಿದ್ದಾನೆ ಎಂದರು.
ಸಂಗಯ್ಯ ಹಿರೇಮಠ ಅವರು ವಿಶ್ವಕರ್ಮರ ಭಾವ ಚಿತ್ರಕ್ಕೆ ಪೂಜೆ, ಪುಷ್ಪ ಸಮರ್ಪನೆ ನೆರವೇರಿಸಿದ ಬಳಿಕ ಸಿಹಿ ವಿತರಿಸುವುದರ ಮೂಲಕ ಸರಳ ಹಾಗೂ ಸಾಂಕೇತಿಕವಾಗಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.
ಮಲ್ಲಪ್ಪ ಕನೋಜಿ, ಮಹಾದೇವಪ್ಪ ಹಡಪದ, ಸಂಜು ಪಣದಿ, ಸುರೇಶ ಬಡಿಗೇರ, ವಿಠಲ ಬಡಿಗೇರ,, ಕಾಳಪ್ಪ ಪತ್ತಾರ, ಭೀಮಶೆಪ್ಪ ಬಡಿಗೇರ, ಬಾಳಪ್ಪ ಬಡಿಗೇರ, ಮಾಂತು ಬಡಿಗೇರ, ಪರಸಪ್ಪ ಬಡಿಗೇರ, ಮಹೇಶ ಪತ್ತಾರ, ವಿನಾಯಕ ಬಡಿಗೇರ, ಶಿವು ನಾಯ್ಕರ, ಮಂಜು ಪತ್ತಾರ, ಪ್ರಕಾಶ ಬಡಿಗೇರ ಸೇರಿದಂತೆ ವಿಶ್ವಕರ್ಮ ಸಮುದಾಯದ ಹಿರಿಯ ನಾಗರಿಕರು, ಯುವಕರು, ಗ್ರಾಮಸ್ಥರು ಇದ್ದರು.

Related posts: