ಗೋಕಾಕ: ಬಕ್ರೀದ್ ಹಬ್ಬದ ಸಂಭ್ರಮ : ಪರಸ್ಪರ ಹಬ್ಬದ ಶುಭಾಶಯಗಳ ಕೋರಿದ ಮುಸ್ಲಿಂ ಬಾಂಧವರು
ಗೋಕಾಕಿನಲ್ಲಿ ಬಕ್ರೀದ್ ಹಬ್ಬದ ಸಂಭ್ರಮ : ಪರಸ್ಪರ ಹಬ್ಬದ ಶುಭಾಶಯಗಳ ಕೋರಿದ ಮುಸ್ಲಿಂ ಬಾಂಧವರು
ಗೋಕಾಕ ಸೆ 2 : ಬೆಳಗಾವಿ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರದಂದು ಮುಸ್ಲಿಂ ಭಾಂಧವರು ಸೇರಿ ಈದ್ ಉಲ್ ಅಝಾ ಆಚರಿಸಿದರು
ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ ಹಬ್ಬವನ್ನು ಗೋಕಾಕನಲ್ಲಿಯೂ ಸಹ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು
ನಗರದ ಈದ್ಗಾ ಮೈದಾನ ಸೇರಿದಂತೆ ವಿವಿಧ ಮಸೀದಿಗಳಲ್ಲಿ ಇಂದು ಬೆಳಗ್ಗೆಯೇ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ನೆರವೇರಿತು
ಲಕ್ಷಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ನಗರದ ಈದಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು ಸಾಮೂಹಿಕ ಪ್ರಾರ್ಥನೆಯಲ್ಲಿ ಹಾಜಿ ಬಸ್ಸಪುರ (ಅಮೀರಸಾಬ) ಅವರು ಬಕ್ರೀದ ಹಬ್ಬದ ಸಂದೇಶ ನೀಡಿದರು ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ ಹಬ್ಬವನ್ನು ಅಲ್ಹಾನ ಆಜ್ಞೆಯಂತೆ ಆಚರಿಸಬೇಕು ಪ್ರೀತಿ ಸಹಬಾಳ್ವೆಯಿಂದ ಒಬ್ಬ ಉತ್ತಮ ಮಾನವನಾಗಿ ಧಾರ್ಮಿಕ ಕರ್ತವ್ಯಗಳನ್ನು ನಿಭಾಯಿಸಬೇಕು ಎಂದು ಸಂದೇಶ ನೀಡಿದರು
ಹೊಸ ಬಟ್ಟೆ ತೊಟ್ಟುಕೊಂಡ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಸಂಭ್ರಮವನ್ನು ಶುಭಾಶಯಗಳ ಮೂಲಕ ಹಂಚಿ ಸಂಭ್ರಮಿಸಿದರು
ಈದ್ಗಾ ಮೈದಾನದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ನಗರಸಭೆ ಹಿರಿಯ ಸದಸ್ಯ ಎಸ್.ಎ.ಕೋತವಾಲ , ಅಬ್ದುಲರಹೇಮಾನ ದೇಸಾಯಿ, ಹಾಜಿ ನಜೀರಅಹ್ಮದ್ ಶೇಖ , ಹಾಜಿ ಕುತಬುದ್ದೀನ ಗೋಕಾಕ, ಹಾಜಿ ಇಲ್ಲಾಹಿ ಖೈರದಿ , ಮಲಿಕ್ ಪೈಲವಾನ , ಡಿ.ಯು.ಅತ್ತಾರ , ಬಿಇಓ ಜಿ.ಬಿ.ಬಳಗಾರ , ಮೆಹೆಬೂಬ ಅಂಕಲಗಿ , ಎಂ.ಡಿ.ಮುಜಾವರ , ಅಬ್ಬಾಸ ದೇಸಾಯಿ , ಸಾದಿಕ ಹಲ್ಯಾಳ , ಸೇರಿದಂತೆ ಸಾವಿರಾರು ಜನ ಉಪಸ್ಥಿತರಿದ್ದು ದೇವರ ಕರುಣೆಗೆ ಪಾತ್ರರಾದರು
ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ , ಬಿಜಿಪಿ ಮುಖಂಡ ಅಶೋಕ ಪೂಜೇರಿ ಡಿವಾಯ್ಎಸಪಿ ವೀರಭದ್ರಯ್ಯ , ಸೇರಿದಂತೆ ಅನೇಕ ಗಣ್ಯರು ಮುಸ್ಲೀಂ ಬಾಂಧವರಿಗೆ ಬಕ್ರೀದ ಹಬ್ಬದ ಶುಭಾಶಯ ಕೋರಿದರು

