RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ:ಕೊವಿಡ್ ಸೋಂಕಿತರಿಗೆ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಆಕ್ಸಿಜನ್ ವ್ಯವಸ್ಥೆ : ಶಾಸಕ ಸತೀಶ ಜಾರಕಿಹೊಳಿ

ಗೋಕಾಕ:ಕೊವಿಡ್ ಸೋಂಕಿತರಿಗೆ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಆಕ್ಸಿಜನ್ ವ್ಯವಸ್ಥೆ : ಶಾಸಕ ಸತೀಶ ಜಾರಕಿಹೊಳಿ 

ಕೊವಿಡ್ ಸೋಂಕಿತರಿಗೆ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಆಕ್ಸಿಜನ್ ವ್ಯವಸ್ಥೆ : ಶಾಸಕ ಸತೀಶ ಜಾರಕಿಹೊಳಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 23 :

 
ಗೋಕಾಕ ಮತ್ತು ಯಮಕನಮರಡಿ ಮತಕ್ಷೇತ್ರದಲ್ಲಿ ಕೊವಿಡ ಸೋಂಕಿತರಿಗೆ ಅವಶ್ಯಕತೆ ಅನುಸಾರ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಉಚಿತವಾಗಿ ಆಕ್ಸಿಜನ್ ಸಿಲಿಂಡರ್ ವಿತರಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು

ರವಿವಾರದಂದು ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಆಕ್ಸಿಜನ್ ಸಿಲಿಂಡರ್ ಪ್ರದರ್ಶನ ಕಾರ್ಯಕ್ರಮದಲ್ಲಿ ಸಿಲಿಂಡರ್ ಗಳನ್ನು ಪ್ರದರ್ಶಿಸಿ ಅವರು ಮಾತನಾಡಿದರು

ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು ಮನೆಯಲ್ಲಿ ಇದ್ದು ಕೊರೋನಾ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ಉಸಿರಾಟದ ತೊಂದರೆಯಾದರೆ ಸತೀಶ ಜಾರಕಿಹೊಳಿ ಫೌಂಡೇಶನ ಕಾರ್ಯಕರ್ತರಿಗೆ ಸಂಪರ್ಕಿಸಿದರೆ ತಕ್ಷಣ ವೈದ್ಯರ ತಂಡದೊಂದಿಗೆ ಆಗಮಿಸಿ ಅವಶ್ಯಕತೆಗೆ ಅನುಗುಣವಾಗಿ ಸೋಂಕಿತರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗುವುದು ಎಂದ ಸತೀಶ ಅವರು ಇದರ ಸದುಪಯೋಗ ಪಡೆದು ಗುಣಮುಖರಾಗಬೇಕೆಂದು ಮನವಿ ಮಾಡಿಕೊಂಡರು.
ಮೊದಲಿಗೆ 20 ಸಿಲಿಂಡರ್ ಗಳ ವ್ಯವಸ್ಥೆ ಮಾಡಲಾಗಿದ್ದು, ಸೇವಾ ಮನೋಭಾವದಿಂದ ಇನ್ನು ಹೆಚ್ಚಿನ ವೈದ್ಯರು ಮುಂದು ಬಂದರೆ ಗೋಕಾಕ ನಗರದ ಎನ್.ಎಸ್.ಎಫ್ ದಲ್ಲಿ ಕೊವಿಡ ಕೇರ ಸೆಂಟರ ಪ್ರಾರಂಭಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಹೆಚ್ಚಿನ ಮಾಹಿತಿಗಾಗಿ 8951885120, 94484 21063 ಈ ನಂಬರಗಳಿಗೆ ಸಂರ್ಪಕಿಸುವಂತೆ ಕೋರಿದರು

ಈ ಸಂದರ್ಭದಲ್ಲಿ ಡಾ.ಜಾವೇದ ಚೌಗಲಾ , ಸತೀಶ ಜಾರಕಿಹೊಳಿ ಪೌಂಡೇಶನ್ ರಿಯಾಜ ಚೌಗಲಾ ಸೇರಿದಂತೆ ಇತರರು ಇದ್ದರು .

Related posts: