RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ರಸಗೊಬ್ಬರದ ಅಭಾವವಿಲ್ಲ : ಸಹಾಯಕ ನಿರ್ದೇಶಕ ಎಮ್.ಎಮ್.ನದಾಫ

ಗೋಕಾಕ:ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ರಸಗೊಬ್ಬರದ ಅಭಾವವಿಲ್ಲ : ಸಹಾಯಕ ನಿರ್ದೇಶಕ ಎಮ್.ಎಮ್.ನದಾಫ 

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ರಸಗೊಬ್ಬರದ ಅಭಾವವಿಲ್ಲ : ಸಹಾಯಕ ನಿರ್ದೇಶಕ ಎಮ್.ಎಮ್.ನದಾಫ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 24 :

 

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ರಸಗೊಬ್ಬರದ ಅಭಾವವಿಲ್ಲ. ರೈತರು ಯಾವುದೇ ಆತಂಕಕ್ಕೆಗೊಳಗಾಗದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಕೃಷಿ ಸಹಾಯಕ ನಿರ್ದೇಶಕ ಎಮ್.ಎಮ್.ನದಾಫ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಎರಡು ತಾಲೂಕುಗಳಲ್ಲಿ ವಾರ್ಷಿಕ 9085 ಮೆಟ್ರಿಕ್ ಟನ್ ಯೂರಿಯಾ ಬೇಡಿಕೆಯಿದ್ದು, ಇಲ್ಲಿಯವರೆಗೆ 12088 ಮೆಟ್ರಿಕ್ ಟನ್ ಯೂರಿಯಾ ಪೂರೈಕೆಯಾಗಿದ್ದು, ಅಂದರೆ ಬೇಡಿಕೆಗಿಂತ ಹೆಚ್ಚಿಗೆ 3000 ಮೆಟ್ರಿಕ್ ಟನ್ ಪೂರೈಕೆಯಾಗಿರುತ್ತದೆ. ಇನ್ನೂಂದು ವಾರದಲ್ಲಿ ಹೆಚ್ಚುವರಿಯಾಗಿ 1500 ಮೆಟ್ರಿಕ್ ಟನ್ ಯೂರಿಯಾ ಪೂರೈಕೆಯಾಗಲಿದ್ದು ರೈತರು ಯೂರಿಯಾ ಗೊಬ್ಬರಕ್ಕಾಗಿ ಆತಂಕ ಪಡುವ ಅಗತ್ಯವಿಲ್ಲ. ಕೃಷಿ ಇಲಾಖೆ ವತಿಯಿಂದ ಸಮರ್ಪಕ ರಸಗೊಬ್ಬರ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಳ್ಳೆಯ ಮಳೆಯಾಗಿರುವುದರಿಂದ ಶೇ.90% ರಷ್ಟು 91144 ಹೆಕ್ಟರ್ ಕ್ಷೇತ್ರ ಬಿತ್ತನೆಯಾಗಿರುತ್ತದೆ ಎರಡೂ ತಾಲೂಕುಗಳಲ್ಲಿ ಕಬ್ಬು, ಗೋವಿನ ಜೋಳ, ಸೂರ್ಯಕಾಂತಿ, ಹಾಗೂ ಹತ್ತಿ ಮತ್ತು ಅರಿಶಿಣ ಮುಖ್ಯ ಬೆಳೆಗಳಾಗಿರುತ್ತವೆ. ರೈತರು ಮಣ್ಣು ಪರೀಕ್ಷೆ ಶಿಫಾರಸ್ಸಿನಂತೆ ರಸಗೊಬ್ಬರಗಳನ್ನು ಉಪಯೋಗಿಸಬೇಕು. ಕೇವಲ ಯೂರಿಯಾ ರಸಗೊಬ್ಬರ ಒಂದನ್ನೇ ಬಳಸದೇ ಬೆಳೆಗಳಿಗೆ ಬೇಕಾದ ಡಿ.ಎ.ಪಿ ಎಂ.ಒ.ಪಿ ಸಂಯುಕ್ತ ರಸಗೊಬ್ಬರಗಳನ್ನು ಉಪಯೋಗಿಸಿದಾಗ ಮಾತ್ರ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ, ಅಲ್ಲದೆ ರೈತರು ರಸಗೋಬ್ಬರ ಚೀಲಗಳ ಮೇಲೆ ನಮೂದಿಸಿದ ಮಾರಾಟ ಬೆಲೆ ಮಾತ್ರ ನೀಡಬೇಕು. ರೈತರು ದಪ್ಪಕಾಳು ಹಾಗೂ ಸಣ್ಣ ಕಾಳು ಎಂದು ಖರೀದಿ ಸಮಯದಲ್ಲಿ ಗೊಂದಲ ಮಾಡಿಕೊಳ್ಳಬಾರದು ಕೆಲವೊಂದು ರಸಗೊಬ್ಬರಗಳ ಗಾತ್ರ ಸಣ್ಣಕಾಳು ಹಾಗೂ ದಪ್ಪಕಾಳು ಇರುತ್ತದೆ. ಆದರೆ ಅವುಗಳು ಹೋಂದಿರುವ ಪೋಷಕಾಂಶ ಮಾತ್ರ ನಿಗದಿತ ಮಟ್ಟ ಹೊಂದಿರುತ್ತದೆ ಮಾರಾಟಗಾರರು ಹೆಚ್ಚಿನ ಬೆಲೆ ಬೇಡಿದಲ್ಲಿ ರೈತರು ಅಂತಹ ಮಾರಾಟಗಾರರ ವಿವರಗಳನ್ನು ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖೆಗೆ ಸೂಚಿಸಿದರೆ ತಕ್ಷಣ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.
ರಸಗೊಬ್ಬರ ಮಾರಾಟಗಾರರು ರೈತರಿಗೆ ಕಡ್ಡಾಯವಾಗಿ ರಶೀದಿಯನ್ನು ನೀಡಬೇಕು ಹಾಗೂ ಪಿ.ಒ.ಎಸ್ ಮಶೀನ ಬಳಸಬೇಕು ದರ ಪಟ್ಟಿಯನ್ನು ಕಡ್ಡಾಯವಾಗಿ ಹಾಕಿರಬೇಕು ಮತ್ತು ಯೂರಿಯಾ ರಸಗೊಬ್ಬರದ ಕೃತಕ ಅಭಾವ ಸೃಷ್ಠಿ ಮಾಡುವುದನ್ನು ಕಂಡು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಂ.ಎಂ.ನದಾಫ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: