ಗೋಕಾಕ:ತಾಲೂಕಿನ ದುರದುಂಡಿ ಗ್ರಾಮದಲ್ಲಿ 2 ಕೊರೋನಾ ಸೋಂಕು ಪತ್ತೆ : ಡಾ.ಜಗದೀಶ ಜಿಂಗಿ ಮಾಹಿತಿ
ತಾಲೂಕಿನ ದುರದುಂಡಿ ಗ್ರಾಮದಲ್ಲಿ 2 ಕೊರೋನಾ ಸೋಂಕು ಪತ್ತೆ : ಡಾ.ಜಗದೀಶ ಜಿಂಗಿ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 15 :
ತಾಲೂಕಿನ ದುರದುಂಡಿ ಗ್ರಾಮದಲ್ಲಿ 2 ಕೊರೋನಾ ಸೋಂಕು ಪತ್ತೆಯಾಗಿವೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ . ಜಗದೀಶ ಜಿಂಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ದುರದುಂಡಿ ಗ್ರಾಮದ ( 37) ಮತ್ತು ( 23) ವರ್ಷದ ಯುವಕರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಕೊರೋನಾ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿನಿಂದ ತಾತ್ಕಾಲಿಕವಾಗಿ ಬಿಡುಗಡೆಗೊಂಡ (23) ವರ್ಷದ ಯುವಕ ಹಾಗೂ ಆನಾರೋಗ್ಯದ ಕಾರಣ ಗೋಕಾಕ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ (37) ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ. 37 ವರ್ಷದ ಸೋಂಕಿತ ವ್ಯಕ್ತಿ ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಿಂಡಲಗಾದಿಂದ ಬಂದಿರುವ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ
ಎಂದು ಡಾ.ಜಿಂಗಿ ತಿಳಿಸಿದ್ದಾರೆ.
ಇಬ್ಬರು ಸೋಂಕಿತರು ವಾಸಿಸುವ ಪ್ರದೇಶದ 50 ಮೀಟರ ಪ್ರದೇಶವನ್ನು ಸಿಲ್ಡೌನ ಮಾಡಿ ಸೂಕ್ತ ಕ್ರಮ ಜರುಗಿಸಲಾಗುವುದಲ್ಲದೆ ನಾಳೆ ತಹಶೀಲ್ದಾರ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆಯನ್ನು ನಡೆಯಿಸಿ ಕೊರೋನಾ ಹರಡದಂತೆ ಗ್ರಾಮಸ್ಥರಲ್ಲಿ ಜಾಗೃತಿ ಮಾಡಲಾಗುವುದು. ಎಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಗ್ರಾಮದ 60 ವರ್ಷ ಮೇಲ್ಪಟ ಮತ್ತು ಸಕ್ಕರೆ ಕಾಯಿಲೆ ಸೇರಿದಂತೆ ಇತರ ಅನಾರೋಗ್ಯ ಹೊಂದಿದವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ಕ್ರಮ ಜರುಗಿಸಲಾಗುವುದು ಎಂದು ಡಾ. ಜಿಂಗಿ ತಿಳಿಸಿದ್ದಾರೆ.