ಘಟಪ್ರಭಾ:ಪಿ.ಎಸ್.ಐ ಎಸ್.ದೇವನ್ ಅವರಿಗೆ ಕನ್ನಡ ಪರ ಸಂಘಟನೆಯಿಂದ ಸನ್ಮಾನ
ಪಿ.ಎಸ್.ಐ ಎಸ್.ದೇವನ್ ಅವರಿಗೆ ಕನ್ನಡ ಪರ ಸಂಘಟನೆಯಿಂದ ಸನ್ಮಾನ
ಘಟಪ್ರಭಾ ಅ 27: ಸ್ಥಳೀಯ ಪೊಲೀಸ ಠಾಣೆಗೆ ನೂತನ ಪಿ.ಎಸ್.ಐ ಆಗಿ ಅಧಿಕಾರ ಸ್ವೀಕರಿಸಿದ ಎಸ್.ದೇವನ್ ಅವರಿಗೆ ಕರ್ನಾಟಕ ಯುವ ಸೇನೆ ಸಂಘಟನೆಯ ಪರವಾಗಿ ಜಿಲ್ಲಾಧ್ಯಕ್ಷ ವೀರಣ್ಣಾ ಸಂಗಮನವರ ಸ್ವಾಗತ ಕೋರಿ ಶುಕ್ರವಾರದಂದು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ.ಎಸ್.ಐ ಎಸ್.ದೇವನ್ ಅವರು ಅಪರಾಧಗಳನ್ನು ತಡೆಗಟ್ಟಲು ಮತ್ತು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಸ್ತುವಾರಿ ಭರಮು ಗಾಡಿವಡ್ಡರ, ಜಿಲ್ಲಾ ಕಾನೂನು ಸಲಹೆಗಾರ ನ್ಯಾಯವಾದಿ ಕೆಂಪಣ್ಣಾ ಚೌಕಶಿ, ಉಪಾಧ್ಯಕ್ಷ ಮಾರುತಿ ಶಿಂಗಾರಿ, ಶಿವರಾಜ ಚಿಗಡೊಳ್ಳಿ, ಭೀಮಶಿ ಗಂಟೆನ್ನವರ, ನಿತಿನ ದೇಶಪಾಂಡೆ, ಸಾಗರ ಸಂಕನ್ನವರ, ಈರಣ್ಣಾ ಹೊಸಪೇಟಿ, ನೇಮಿನಾಥ ಜೈನ, ದಸ್ತಗೀರ ಜಮಾದಾರ, ಮಹೇಶ ಬೆಳಗಾವಕರ, ಹರೀಶ ಮೇದಾರ, ಸುರೇಶ ಮೇದಾರ, ಹಿದಾಯತ್ ಮುಲ್ಲಾ, ಹಣಮಂತ ಭಂಗಿ, ಸಾಯಣ್ಣಾ ಕೋಮಾರಿ ಸೇರಿದಂತೆ ಅನೇಕರು ಇದ್ದರು.