RNI NO. KARKAN/2006/27779|Friday, October 17, 2025
You are here: Home » breaking news » ಗೋಕಾಕ:ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ 8 ವರ್ಷದ ಬಾಲಕಿಗೆ ಕೊರೋನಾ ಪತ್ತೆ : ಡಾ.ಜಗದೀಶ ಜಿಂಗಿ ಮಾಹಿತಿ

ಗೋಕಾಕ:ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ 8 ವರ್ಷದ ಬಾಲಕಿಗೆ ಕೊರೋನಾ ಪತ್ತೆ : ಡಾ.ಜಗದೀಶ ಜಿಂಗಿ ಮಾಹಿತಿ 

ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ 8 ವರ್ಷದ ಬಾಲಕಿಗೆ ಕೊರೋನಾ ಪತ್ತೆ : ಡಾ.ಜಗದೀಶ ಜಿಂಗಿ ಮಾಹಿತಿ

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 2 :

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ತನ್ನ ರುದ್ರ ನರ್ತನ ಮುಂದುವರೆಸಿದ್ದು ,ಇಲ್ಲಿಯವರೆಗೆ ಕೊರೋನಾ ಮುಕ್ತ ನಗರವಾಗಿದ್ದ ಗೋಕಾಕಕ್ಕೆ ಇಂದು ಕೊರೋನಾ ಎಂಟ್ರಿಯಾಗಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

ನಗರದ ಕುರುಬರ ಪೂಲ್ ಹತ್ತಿರವಿರುವ ಭಜಂತ್ರಿ ಗಲ್ಲಿಯ 8 ವರ್ಷದ ಬಾಲಕಿಗೆ ಕೊರೋನಾ ಸೋಂಕು ಧೃಡಪಟ್ಟಿದ್ದೆ.

ಕಳೆದ ತಿಂಗಳು ಆರೋಗ್ಯ ಇಲಾಖೆಯಿಂದ ಕೊರೋನಾ ಮುಂಜಾಗ್ರತಾ ಕ್ರಮವಾಗಿ ಸಮುದಾಯ ಹರಡುವಿಕೆ ಬಗ್ಗೆ ಸಂಶಯಪಟ್ಟು ಜೂನ 16 ರಿಂದ 23 ರವರೆಗೆ ಕೊಳಚೆ ಪ್ರದೇಶಗಳಲ್ಲಿ ಸುಮಾರು 1500ಕ್ಕೂ ಹೆಚ್ಚು ಜನರ ಗಂಟಲು ದ್ರವವನ್ನು ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು, ಅದರಲ್ಲಿ ಈ ಬಾಲಕಿಗೆ ಮಾತ್ರ ಕೊರೋನಾ ಪಾಜಿಟಿವ ಇರುವದು ಪತ್ತೆಯಾಗಿದೆ ಎಂದು ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.

ಗಂಟಲು ದ್ರವ ಪರೀಕ್ಷೆಯ ಸಂದರ್ಭದಲ್ಲಿ ಗೋಕಾಕ ನಗರದ ಭಜಂತ್ರಿ ಗಲ್ಲಿಯ ಬಾಲಕಿಯಲ್ಲಿದ್ದ ಬಾಲಕಿ ನಂತರ ಕೌಜಲಗಿ ಗ್ರಾಮದ ಸಂಬಂದಧಿಕರ ಮನೆಯಲ್ಲಿ ಇದ್ದಳು. ಬಾಲಕಿಯ ಟ್ರಾವಲ್ ಹಿಸ್ಟರಿ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಕೊರೋನಾ ಪಾಜಿಟಿವ ಪ್ರಕರಣದ ಧೃಡಪಟ್ಟ ಭಜಂತ್ರಿ ಗಲ್ಲಿ ಮತ್ತು ಬಾಲಕಿ ವಾಸವಿದ್ದ ಕೌಜಲಗಿ ಗ್ರಾಮದ ಮನೆಗೆ ಹೊಂದಿಕೊಂಡು 50 ಮೀಟರ್ ಪ್ರದೇಶವನ್ನು ಸಿಲಡೌನ ಮಾಡಲು ತಾಲೂಕಾಡಳಿತ ಸೂಕ್ತ ಕ್ರಮ ಜರುಗಿಸಲಿದೆ ಎಂದು ತಿಳಿಸಿರುವ ಡಾ.ಜಗದೀಶ ಜಿಂಗಿ ಅವರು ಈ ಪ್ರಕರಣದಿಂದ ಕೊರೋನಾ ಸೋಂಕು  ಸಮುದಾಯಕ್ಕೆ  ಹರಡುವಿಕೆಯಿಂದ ಸಾರ್ವಜನಿಕರಿಗೆ ಚಿಂತೆಗಿಡು ಮಾಡಿದ್ದು, ಸಾರ್ವಜನಿಕರು ಭಯಪಡದೆ ಜಾಗೃತಿಯಿಂದ ಇರಬೇಕು ಎಂದು ಡಾ‌.ಜಿಂಗಿ ಮನವಿ ಮಾಡಿಕೊಂಡಿದ್ದಾರೆ.

 

Related posts: