RNI NO. KARKAN/2006/27779|Wednesday, January 14, 2026
You are here: Home » breaking news » ಗೋಕಾಕ:ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿ ಕೋಳಿ : ಡಾ.ರಾಜೇಂದ್ರ ಸಣ್ಣಕ್ಕಿ

ಗೋಕಾಕ:ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿ ಕೋಳಿ : ಡಾ.ರಾಜೇಂದ್ರ ಸಣ್ಣಕ್ಕಿ 

ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿ ಕೋಳಿ : ಡಾ.ರಾಜೇಂದ್ರ ಸಣ್ಣಕ್ಕಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಜೂ 8 :

 

ಪ್ರತಿಯೊಬ್ಬರೂ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಿ, ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿ ಕೊಳ್ಳಬೇಕು ಎಂದು ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಸಮೀಪದ ಗೋಸಬಾಳ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸೋಮವಾರ ಜೂ.8 ರಂದು ನಡೆದ ಕಸ ಮುಕ್ತ ಗ್ರಾಮ ಎಂಬ ಅಭಿಯಾನದಡಿಯಲ್ಲಿ ಸ್ಥಳೀಯ ಪ್ರತಿ ಮನೆಗಳಿಗೆ ಹಾಗೂ ಅಂಗಡಿ-ಮುಂಗಟ್ಟುಗಾರರಿಗೆ ಕಸದ (ಡಸ್ಟ್‍ಬಿನ್) ತೊಟ್ಟಿಗಳನ್ನು ವಿತರಿಸಿ ಮಾತನಾಡಿದ ಅವರು, ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳನ್ನು ಸ್ಥಳೀಯರು ಕಸದ ತೊಟ್ಟಿಗಳಲ್ಲಿ ಹಾಕಿ ಗ್ರಾಮವನ್ನು ಸ್ವಚ್ಚವಾಗಿರಿಸಿಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೋಸಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳ ಪ್ರತಿ ಮನೆಗಳಿಗೆ ಹಾಗೂ ಅಂಗಡಿ-ಮುಂಗಟ್ಟುದಾರರಿಗೆ ಕಸದ ತೊಟ್ಟಿಗಳನ್ನು ವಿತರಿಸಲಾಗುವುದು ಎಂದರು. ಗ್ರಾಪಂ ಪಿಡಿಒ ಯಲ್ಲಪ್ಪ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ರಾಮಯ್ಯ ಮಠದ, ಗ್ರಾಪಂ ಸದಸ್ಯರಾದ ಬಸನಗೌಡ ಪಾಟೀಲ, ಬಾಳಪ್ಪ ಬುಳ್ಳಿ, ಸುಭಾಷ ಹಾವಾಡಿ, ಬಸವರಾಜ ಬುಳ್ಳಿ, ಬಾಬು ದೊಡ್ಡಮನಿ, ಭೀಮಪ್ಪ ಹಾವಾಡಿ, ಬಾಲಪ್ಪ ಹಂಚಿನಮನಿ, ಗ್ರಾಪಂ ಕಾರ್ಯದರ್ಶಿ ಲಕ್ಷ್ಮಣ ದೇಯಣ್ಣವರ, ಭೀಮಶಿ ಬುಳ್ಳಿ, ಪರಮೇಶ್ವರ ಕಡಕೋಳ, ಪ್ರವೀಣ ಇಟ್ನಾಳ, ಮಾರುತಿ ಹೊಸಮನಿ ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು, ಇತರರು ಇದ್ದರು.

Related posts: