ಗೋಕಾಕ:ಸಚಿವ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದ ವತಿಯಿಂದ ಉಪಹಾರ ವಿತರಣೆ
ಸಚಿವ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದ ವತಿಯಿಂದ ಉಪಹಾರ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 27 :
ಸಚಿವ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದವರು ಪೊಲೀಸ, ಆರೋಗ್ಯ ಸಿಬ್ಬಂದಿ, ಪೌರಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದು ಸಿಪಿಐ ಗೋಪಾಲ ರಾಠೋಡ ಹೇಳಿದರು.
ಅವರು, ಸಚಿವ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದವರು ಶನಿವಾರದಂದು ವೈದ್ಯಕೀಯ ಸಿಬ್ಬಂಧಿಗಳಿಗೆ ಮಧ್ಯಾಹ್ನದ ಉಪಹಾರ, ಹಣ್ಣು ಹಂಪಲು ಹಾಗೂ ಮಜ್ಜಿಗೆ ವಿತರಿಸಿ, ಮಾತನಾಡಿದರು.
ಕರೋನಾ ಎಂಬ ಮಹಾಮಾರಿಯಿಂದ ಜನರು ತಮ್ಮನ್ನು ರಕ್ಷಿಸಿಕೊಳ್ಳಲು ಅನಗತ್ಯವಾಗಿ ಹೊರಗಡೇ ಬಾರದೇ ಮನೆಯಲ್ಲಿಯೇ ಇರುವಂತೆ ಜನರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಹನಮಂತ ದುರ್ಗನ್ನವರ, ಭೀಮಶಿ ಭರಮಣ್ಣವರ, ಅಡಿವೇಶ ಮಜ್ಜಗಿ, ಮಾಂತು ಕುರಬೇಟ, ಮುತ್ತುರಾಜ ಜಮಖಂಡಿ, ಪ್ರದೀಪ ನಾಗನೂರ, ರವಿ ಪೂಜಾರಿ, ರವಿ ಹನಿಮನಾಳ, ಸತೀಶ ಮನ್ನಿಕೇರಿ, ರಾಜು ಹೀರೆಅಂಬಿಗೇರ, ಸಂಜು ಮುಳಗುಂದ ಸೇರಿದಂತೆ ಸಚಿವ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದವರು ಇದ್ದರು.

