RNI NO. KARKAN/2006/27779|Sunday, August 3, 2025
You are here: Home » breaking news » ಬೆಟಗೇರಿ:ಕುಲಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ಹಳ್ಳಿಗಳಲ್ಲಿ ಗುರುವಾರದಿಂದ ಮತ್ತಷ್ಟು ಬೀಗಿ ಬಂದೂಬಸ್ತ ; ಎಸ್.ಐ ನರಳೆ

ಬೆಟಗೇರಿ:ಕುಲಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ಹಳ್ಳಿಗಳಲ್ಲಿ ಗುರುವಾರದಿಂದ ಮತ್ತಷ್ಟು ಬೀಗಿ ಬಂದೂಬಸ್ತ ; ಎಸ್.ಐ ನರಳೆ 

ಕುಲಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ಹಳ್ಳಿಗಳಲ್ಲಿ ಗುರುವಾರದಿಂದ ಮತ್ತಷ್ಟು ಬೀಗಿ ಬಂದೂಬಸ್ತ ; ಎಸ್.ಐ ನರಳೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಎ 18 :

 

 

 

ದೇಶಾದ್ಯಂತ ಹರಡಿರುವ ಕರೋನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೇ.3ರವರೆಗೆ ಲಾಕ್‍ಡೌನ್ ವಿಸ್ತರಣೆ ಮಾಡಲಾದ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ ಏ.16ರಂದು ಒಂದೇ ದಿನ 17 ಜನರಿಗೆ, ಶುಕ್ರವಾರ ಏ.17ರಂದು 5 ಜನರಿಗೆ ಕರೊನಾ ವೈರಸ್ ದೃಡಪಟ್ಟಿರುವ ಹಿನ್ನಲೆಯಲ್ಲಿ ಬೆಟಗೇರಿ ಗ್ರಾಮ ಸೇರಿದಂತೆ ಕುಲಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ಹಳ್ಳಿಗಳಲ್ಲಿ ಗುರುವಾರದಿಂದ ಮತ್ತಷ್ಟು ಬೀಗಿ ಬಂದೂಬಸ್ತ ಕೈಗೊಳ್ಳಲಾಗಿದೆ ಎಂದು ಕುಲಗೋಡ ಪೊಲೀಸ್ ಠಾಣೆ ಪಿಎಸ್‍ಐ ಹನುಮಂತ ನರಳೆ ತಿಳಿಸಿದ್ದಾರೆ.
ತಮ್ಮ ತಮ್ಮ ಗ್ರಾಮಗಳಲ್ಲಿ ದ್ವಿಚಕ್ರ ವಾಹನ ಸವಾರರು, ಸ್ಥಳೀಯರು ಅನವಶ್ಯಕ ತಿರಗಾಡುವದನ್ನು ಸಂಪೂರ್ಣ ನಿಷೇದಿಸಲಾಗಿದೆ. ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವದು. ಆಸ್ಪತ್ರೆ, ಔಷಧ ಮಳಿಗೆಗಳು ಹೊರತುಪಡಿಸಿ, ಅಂಗಡಿ-ಮುಂಗಟ್ಟುಗಳನ್ನು ನಿಗದಿತ ಸಮಯದಲ್ಲಿ ಮಾತ್ರ ಬಾಗಿಲು ತೆರೆಯಬೇಕು. ಎಲ್ಲಾ ಹಳ್ಳಿಗಳ ಸಾರ್ವಜನಿಕರು ಮನೆಗಳಲ್ಲಿಯೇ ಇರಬೇಕು. ಬೇರೆ ಊರುಗಳಿಗೆ ಹೋಗಬಾರದು, ಕರೊನಾ ದೃಡಪಟ್ಟ ನಗರ, ಪಟ್ಟಣ, ಊರುಗಳಿಂದ ತಮ್ಮ ಊರಿಗೆ ಬರುವವರ ಮೇಲೆ ನಿಗಾವಿಡಬೇಕು ಎಂದು ಸ್ಥಳೀಯರಿಗೆ ಪಿಎಸ್‍ಐ ಹನುಮಂತ ನರಳೆ ಸೂಚಿಸಿದ್ದಾರೆ.
ಸಾರ್ವಜನಿಕರು ಬ್ಯಾಂಕ್, ಕಿರಾಣಿ, ಹಾಲಿನ ಡೈರಿಗಳಿಗೆ ಹೋದಾಗ ಹಾಗೂ ಹಣ್ಣು, ತರಕಾರಿ ತೆಗೆದುಕೊಳ್ಳುವ ಸಮಯದಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಪ್ಪದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ತಮ್ಮ ಗ್ರಾಮದ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದವರ, ಸ್ಥಳೀಯ ಕರೋನಾ ಸೈನಿಕರ, ಸ್ವಯಂ ಸೇವಕರ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಜೋತೆ ಪ್ರತಿಯೊಬ್ಬರೂ ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಪಿಎಸ್‍ಐ ಹನುಮಂತ ನರಳೆ ಹೇಳಿದ್ದಾರೆ.

Related posts: