ಗೋಕಾಕ:ಆರೋಗ್ಯ ಇಲಾಖೆಯ ಕಾರ್ಯನಿರತ ಸಿಬ್ಬಂದಿಗಳಿಗೆ ಎಸ್.ಎಸ್. ಫೌಂಡೇಷನ್ ವತಿಯಿಂದ ಮಾಸ್ಕ ಮತ್ತು ಸಾನಿಟೈಜರ ವಿತರಣೆ
ಆರೋಗ್ಯ ಇಲಾಖೆಯ ಕಾರ್ಯನಿರತ ಸಿಬ್ಬಂದಿಗಳಿಗೆ ಎಸ್.ಎಸ್. ಫೌಂಡೇಷನ್ ವತಿಯಿಂದ ಮಾಸ್ಕ ಮತ್ತು ಸಾನಿಟೈಜರ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 13 :
ಲಾಕಡೌನ್ ಹಿನ್ನೆಲೆಯಲ್ಲಿ ಗೋಕಾಕ ನಗರದ ಸುಖ ಶಾಂತಿ ಪೌಂಡೇಷನ್ ವತಿಯಿಂದ ಗೋಕಾಕಿನ ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಆಂಬುಲೆನ್ಸ್ ಚಾಲಕರಿಗೆ ,ಆಶಾ ಕಾರ್ಯಕರ್ತಯರಿಗೆ ಮತ್ತು ಆಸ್ಪತ್ರೆಯಲ್ಲಿನ ಸಿಬ್ಬಂದಿಗಳಿಗೆ ಹ್ಯಾಂಡ ಸೈನಿಟೈಜರ್ ಮತ್ತು ಮಾಸ್ಕಗಳನ್ನು ಸೋಮವಾರದಂದು ಡಾ. ಬೆಣಚಿನಮರಡಿ ಅವರ ವಿತರಿಸಿದರು.
ಸುಖ ಶಾಂತಿ ಪೌಂಡೇಶನ್ ವತಿಯಿಂದ ಸರಕಾರಿ ಆಸ್ಪತ್ರೆ ಗೋಕಾಕನ ಹೆಲ್ತ ಕ್ಯಾಂಪಲ್ಲಿ ಭಾಗವಹಿಸಿದ್ದ ವೈದ್ಯಾಧಿಕಾರಿಗಳು ಕೊರೋನಾ ಹರಡದಂತೆ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮದ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಡಾ. ಜಗದೀಶ ಜಿಂಗಿ , ಡಾ. ರಾಜೇಶ್ವರಿ ಸಬರದ , ಡಾ. ಶ್ವೇತಾ ಪಾಟೀಲ , ಸುಖ ಶಾಂತಿ ಪೌಂಡೇಶನ್ ನ ಮುಖ್ಯಸ್ಥರಾದ ಶಿವಾನಂದ ರುಸ್ತಾನಪೂರ, ಪ್ರಮುಖರಾದ ವಿಶ್ವನಾಥ ಬಡಿಗೇರ, ಜಮೀರ ಪಿಂಜಾರ, ವಿಜಯ ಕಾಗಲೆ ಉಪಸ್ಥಿತರಿದ್ದರು.