ಘಟಪ್ರಭಾ:ಬಳೋಬಾಳ ಪಂಚಾಯಿತಿ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಸುಮಾರು 2 ಸಾವಿರ ಸಸಿ ನಟ್ಟು ಸಂಭಮಿಸಿ ಕರವೇ ಕಾರ್ಯಕರ್ತರು
ಬಳೋಬಾಳ ಪಂಚಾಯಿತಿ ವ್ಯಾಪ್ತಿಯಲ್ಲಿ ಏಕಕಾಲಕ್ಕೆ
ಸುಮಾರು 2 ಸಾವಿರ ಸಸಿ ನಟ್ಟು ಸಂಭಮಿಸಿ ಕರವೇ ಕಾರ್ಯಕರ್ತರು
ಘಟಪ್ರಭಾ ಅ 13: ಗೋಕಾಕ ಕರ್ನಾಟಕ ರಕ್ಷಣಾ ವೇದಿಕೆ, ಮಠಾಧೀಶರ ವೇದಿಕೆ ಆಶ್ರಯದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಮತ್ತು ವಿವಿದ ಇಲಾಖೆಗಳ ಸಂಯುಕ್ತಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಸಿರು ಗೋಕಾಕಗಾಗಿ ಒಂದು ದಿನ ನಿಮಿತ್ಯ ಏಕ ಕಾಲಕ್ಕೆ ಸುಮಾರು 25 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತ ಪಡಿಸಿ ಕರವೇ, ಅರಣ್ಯ ಇಲಾಖೆ, ಗ್ರಾ.ಮ ಪಂಚಾಯತಿ ನೇತೃತ್ವದಲ್ಲಿ ಬಳೋಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮುಂಜಾನೆ ಸರಿಯಾಗಿ 11 ಗಂಟೆಗೆ ಏಕಕಾಲಕ್ಕೆ ಸುಮಾರು 2000 ಸಸಿಗಳನ್ನು ನೆಡಲಾಯಿತು
ಸಂದರ್ಭದಲ್ಲಿ ತಾ.ಪಂ ಸದಸ್ಯರಾದ ವಿನೋದ ಪೂಜೆರಿ, ಗ್ರಾ.ಪಂ ಸದಸ್ಯ ಲಗಮಣ್ಣ ಕಳಸನ್ನವರ, ಶಿವಪುತ್ರ ಚಿಮ್ಮಡ, ಪಿ.ಡಿ.ಓ. ಸಂಜು ಜೋತಾವರ, ಅರಣ್ಯ ಇಲಾಖೆ ಅಧಿಕಾರಿ ಡಿ.ಶಿವಕುಮಾರ, ಕರವೇ ಅಧ್ಯಕ್ಷ ಮಹಾದೇವ ಮಕ್ಕಳಗೇರಿ, ಉಪಾಧ್ಯಕ್ಷ ಮುತ್ತೇಪ್ಪಾ ಘೋಡಗೇರಿ, ಕಾರ್ಯಾದರ್ಶಿ ಕಾಮೇಶ ಹಂಚಿನಮನಿ, ರಾಜು ಹರಿಜನ, ಶೀಕ್ಷಕರಾದ ಹನಮಂತ ಕಟ್ಟಿಮನಿ ಯುವ ಧುರಿಣರಾದ ನಾಗಪ್ಪಾ ಪಾಟೀಲ, ಧರೇಪ್ಪಾ ಬೆಳವಿ ಸೇರಿದಂತೆ ಇನ್ನು ಹಲವರು ಉಪಸ್ಥಿತರಿದ್ದರು.