ಗೋಕಾಕ:ಪರೀಕ್ಷೆಯಲ್ಲಿ ಗೆಲುವನ್ನು ತಮ್ಮದಾಗಿಸಿಕೊಂಡು ಬದುಕನ್ನು ರೂಪಿಸಿಕೋಳಿ : ಬಿಇಒ ಜಿ.ಬಿ.ಬಳಗಾರ
ಪರೀಕ್ಷೆಯಲ್ಲಿ ಗೆಲುವನ್ನು ತಮ್ಮದಾಗಿಸಿಕೊಂಡು ಬದುಕನ್ನು ರೂಪಿಸಿಕೋಳಿ : ಬಿಇಒ ಜಿ.ಬಿ.ಬಳಗಾರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 23 :
ವಿದ್ಯಾರ್ಥಿಗಳು ಪಾಲಕರ,ಗುರುಗಳ ಮಾರ್ಗದರ್ಶನದಲ್ಲಿ ಪ್ರಯತ್ನ ಶೀಲರಾಗಿ ಪರೀಕ್ಷೆಯಲ್ಲಿ ಗೆಲುವನ್ನು ತಮ್ಮದಾಗಿಸಿಕೊಂಡು ಬದುಕನ್ನು ರೂಪಿಸಿಕೋಳುವಂತೆ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಕರೆ ನೀಡಿದರು.
ರವಿವಾರದಂದು ನಗರದ ಕೆ.ಎಲ್.ಇ ಶಾಲಾ ಆವರಣದಲ್ಲಿ ಇಲ್ಲಿನ ಜೆ.ಸಿ.ಐ ಸಂಸ್ಥೆಯವರು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ , ಪರೀಕ್ಷೆ ಒಂದು ಸಂಭ್ರಮ ಉಚಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಇಲಾಖೆಯೊಂದಿಗೆ ಸಂಘ,ಸಂಸ್ಥೆಗಳು ಸಹಕಾರ ನೀಡುತ್ತಿರುವದು ಮಾರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡುವಂತಹ ಕಾರ್ಯಕ್ರಮಗಳ ಸದುಪಯೋಗದಿಂದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕೆಂದು ಬಳಗಾರ ಹೇಳಿದರು
ಜೆಸಿಐ ಸಂಸ್ಥೆಯ ರಾಷ್ಟ್ರೀಯ ತರಬೇತಿದಾರ ಡಾ.ಮುನಿವಾಸುದೇವ ರೆಡ್ಡಿ ಮಾತನಾಡುತ್ತಾ ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನಗೋಳಿಸಿ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವದೇ ಜೆಸಿಐ ಸಂಸ್ಥೆಯ ಉದ್ದೇಶವಾಗಿದೆ.ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಲ್ಲಿ ಸಂಸ್ಥೆ ಜಗತ್ತಿನಾದ್ಯಂತ ಶ್ರಮಿಸುತ್ತದೆ ವಿದ್ಯಾರ್ಥಿಗಳು ಏಕಾಗ್ರತೆ ಧನಾತ್ಮಕ ಚಿಂತನೆ ಹಾಗೂ ಆರೋಗ್ಯ ರಕ್ಷಣೆಯೊಂದಿಗೆ ಕಠಿಣ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡಿ ಪ್ರಯತ್ನ ಶೀಲರಾದರೆ ಪರೀಕ್ಷೆಗಳಲ್ಲಿ ಒತ್ತಡ ರಹಿತವಾಗಿ ಪಾಲ್ಗೊಂಡು ಹಬ್ಬದಂತೆ ಸಂಭ್ರಮಿಸಬಹುದು ಎಂದು ಹೇಳಿದರು
ಈ ಸಂದರ್ಭದಲ್ಲಿ ತರಬೇತಿದಾರರಾದ ಡಾ.ಮಾಧವಿದೇವಿ ,ಡಾ.ಕೇದಿರೇಶ್ವರ ದಂಡಿನ ಇವರು ಸಹ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು
ವೇದಿಕೆ ಮೇಲೆ ಜೆಸಿಐ ಅಧ್ಯಕ್ಷ ರಜನಿಕಾಂತ್ ಮಾಳೋದೆ , ಕಾರ್ಯದರ್ಶಿ ಶೇಖರ ಉಳ್ಳಾಗಡ್ಡಿ, ಕಾರ್ಯಕ್ರಮ ನಿರ್ದೇಶಕಿ ಮೀನಾಕ್ಷಿ ಸವದಿ, ಪಧಾಧಿಕಾರಿಗಳಾದ ವಿಷ್ಣು ಲಾತೂರ ,ಕೆಂಪ್ಪಣ ಚಿಂಚಲಿ, ಡಾ.ಗುರುರಾಜ ನಿಡೋನಿ , ರವಿ ಮಾಲದಿನ್ನಿ, ವ್ಹಿ.ಎಸ್.ತಡಸಲೂರು,ಮನೀಷಾ ಮಾಳೋದೆ, ಅನ್ನಪೂರ್ಣ ಉಳ್ಳಾಗಡ್ಡಿ , ಭಾಗೀರಥಿ ನಂದಗಾವಿ , ರೋಟರಿ ಸಂಸ್ಥೆಯ ಅಧ್ಯಕ್ಷ ಸೋಮಶೇಖರ್ ಮಗದುಮ್ಮ , ಮುಖ್ಯೋಪಾಧ್ಯಾಯರುಗಳಾದ ಅನುಪಾ ಕೌಶೀಕ ,ಸಿ.ಬಿ.ಪಾಗದ, ಎ.ಜಿ.ಕೋಳಿ, ಪ್ರಾಚಾರ್ಯ ಜತ್ತಿ , ಎಂ.ಸಿ ವಣ್ಣೂರ ಇದ್ದರು