ಕೌಜಲಗಿ:ಕೌಜಲಗಿಯಲ್ಲಿ ವಿಶ್ವಮಾನವ ದಿನಾಚರಣೆ ನಿಮಿತ್ಯ ವಿದ್ಯಾರ್ಥಿಗಳಿಗೆ ಕುವೆಂಪುರವರ ಕೃತಿ ವಿತರಣೆ
ಕೌಜಲಗಿಯಲ್ಲಿ ವಿಶ್ವಮಾನವ ದಿನಾಚರಣೆ ನಿಮಿತ್ಯ ವಿದ್ಯಾರ್ಥಿಗಳಿಗೆ ಕುವೆಂಪುರವರ ಕೃತಿ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಕೌಜಲಗಿ ಡಿ 29 :
ಪಟ್ಟಣದ ಡಾ. ಎಮ್.ಎಮ್.ದಳವಾಯಿ ಪ್ರೌಢಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯ ಅಂಗವಾಗಿ ‘ವಿಶ್ವಮಾನವ ದಿನಾಚರಣೆ’ ಆಚರಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯ ವಿವೇಕ ಹಳ್ಳೂರ ವಿದ್ಯಾರ್ಥಿಗಳಿಗೆ ಕುವೆಂಪುರವರ ಕೃತಿಗಳನ್ನು ವಿತರಿಸಿ, ಕುವೆಂಪುರವರ ವಿಶ್ವಮಾನವ ಸಂದೇಶಕ್ಕಾಗಿ ತಿಳಿಸಿದ ಸಪ್ತಸೂತ್ರಗಳನ್ನು ಹೇಳಿ ಎಲ್ಲ ವಿದ್ಯಾರ್ಥಿಗಳು ಈ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಲ್.ಎಚ್. ಕೌಜಲಗಿ, ಎಸ್ ಎಸ್ ಖಡಕಭಾವಿ, ವಿ.ಕೆ.ಬಂಡಿವಡ್ಡರ, ಎಸ್.ಆರ್.ಉಪ್ಪಿನ, ಎಮ್.ಡಿ.ಕಟ್ಟಿಮನಿ, ಎಸ್. ಎಸ್.ಹೊಸಕೋಟಿ ಮುಂತಾದವರು ಭಾಗವಹಿಸಿದ್ದರು.