RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಪ್ರತಿಯೊಬ್ಬರಲ್ಲಿ ಪ್ರತಿಭೆ ಅವರದೆ ವಿಶೇಷ ಕಾರ್ಯ ಶೈಲಿಯಿಂದ ಕೂಡಿರುತ್ತದೆ : ಸದಾಶಿವ ಹಚಡದ

ಗೋಕಾಕ:ಪ್ರತಿಯೊಬ್ಬರಲ್ಲಿ ಪ್ರತಿಭೆ ಅವರದೆ ವಿಶೇಷ ಕಾರ್ಯ ಶೈಲಿಯಿಂದ ಕೂಡಿರುತ್ತದೆ : ಸದಾಶಿವ ಹಚಡದ 

ಪ್ರತಿಯೊಬ್ಬರಲ್ಲಿ ಪ್ರತಿಭೆ ಅವರದೆ ವಿಶೇಷ ಕಾರ್ಯ ಶೈಲಿಯಿಂದ ಕೂಡಿರುತ್ತದೆ : ಸದಾಶಿವ ಹಚಡದ

 

ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಡಿ 3 :

 

ಪ್ರತಿಯೊಬ್ಬರಲ್ಲಿ ಪ್ರತಿಭೆ ಅವರದೆ ವಿಶೇಷ ಕಾರ್ಯ ಶೈಲಿಯಿಂದ ಕೂಡಿರುತ್ತದೆ. ಪ್ರತಿಭೆಗೆ ಸೂಕ್ತ, ಮುಕ್ತ ಅವಕಾಶ ಕಲ್ಪಿಸಿದಾಗ ಸೂಪ್ತ ಪ್ರತಿಭೆ ಹೊರತರುವಲ್ಲಿ ಸಹಾಯಕವಾಗುವದು ಎಂದು ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಸದಾಶಿವ ಹಚಡದ ಹೇಳಿದರು.

ಅವರು ಸಮೀಪದ ನೇಮಗೌಡರ ತೋಟದ ಶಾಲೆಯಲ್ಲಿ ಮಂಗಳವಾರ ಜರುಗಿದ ತಾಲೂಕಾ ವಿಶ್ವ ವಿಕಲಚೇತನ ಮಕ್ಕಳ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ವಿಕಲತೆಯನ್ನುವದು ದೈಹಿಕ ಹಾಗೂ ಮಾನಸಿಕವಾಗಿ ಆಗಿರುವಂತಹದು. ಇಂತಹ ಚೇತನಾ ಶೀಲ ಮಕ್ಕಳಿಗೆ ವಿಶೇಷ ಪ್ರಾತಿನಿದ್ಯ ನೀಡುವ ಮೂಲಕ ಭವಿಷ್ಯತ್ತಿನಲ್ಲಿ ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವದು ನಮ್ಮ ಕರ್ತವ್ಯವಾಗಿದೆ. ವಿಶೇಷ ಚೇತನ ಮಕ್ಕಳ ಬಗ್ಗೆ ಕಾಳಜಿವಹಿಸಿ ಶಾಲಾ ಪರಿಸರದಲ್ಲಿ ಅವರಿಗೂ ಮುಕ್ತ ಅವಕಾಶ ನೀಡಿದಾಗ ಅವರು ಸಹ ಸಾಮಾನ್ಯ ಮಕ್ಕಳಂತೆ ಕಲಿಕೆ ಆಟೋಟಗಳಲ್ಲಿ ಮುಂದೆ ಬರಲು ಸಹಾಯಕವಾಗುವದು ಎಂದು ಹೇಳಿದರು.
ವಿಷಯ ಪರಿವೀಕ್ಷಕ ಅರಿಹಂತ ಬಿರಾದಾರ ಪಾಟೀಲ ಮಾತನಾಡಿ, ದೇಶದಲ್ಲಿರುವ ವಿಶೇಷ ಚೇತನ ಮಕ್ಕಳಿಗೆ ಹಾಗೂ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹತ್ತಾರು ಯೋಜನೆಗಳು ಜಾರಿಯಲ್ಲಿವೆ. ಅವುಗಳ ಸದುಪಯೋಗವಾಗುವ ನಿಟ್ಟಿನಲ್ಲಿ ಶಿಕ್ಷಕರು, ಪಾಲಕರು, ಪೋಷಕರು, ಅಧಿಕಾರಿ ವರ್ಗದವರ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಿಶೇಷ ಚೇತನರು ದೈವಿ ಮಕ್ಕಳಾಗಿದ್ದು ಅವರ ಸೇವೆಯಿಂದ ಪುಣ್ಯ ಪ್ರಾಪ್ತಿಯಾಗುವದು ಎಂದು ಹೇಳಿದರು.
ವಿಶೇಷ ಚೇತನ ಮಕ್ಕಳಿಗೆ ಹಾಗೂ ಪಾಲಕರಿಗೆ ಕಪ್ಪೆ ಜಿಗಿತ, 100 ಮೀ ಓಟ, ಮ್ಯುಸಿಕಲ್ ಚೇರ್, ಮಡಿಕೆ ಒಡೆಯುವದು, ಗೋಣಿ ಚೀಲದಾಟ, ಲಿಂಬು ಚಮಚದಂತಹ ಮನೊರಂಜನಾತ್ಮಕ ಸ್ಪರ್ಧೆಗಳನ್ನು ಜರುಗಿದವು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಬಿಇಒ ಅಜೀತ ಮನ್ನಿಕೇರಿ ಭಾಗವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ಉಪನಿರ್ಧೇಶಕರ ಕಛೇರಿಯ ವಿಷಯ ಪರಿವೀಕ್ಷಕ ವಿ.ಎಸ್ ಕಾಂಬಳೆ, ಡೈಟ್ ಉಪನ್ಯಾಸಕ ಎಮ್.ಡಿ ಬೇಗ್, ಶಿಕ್ಷಣ ಪ್ರೇಮಿ ಸಿದ್ದಪ್ಪ ಬಳಿಗಾರ, ಎಸ್.ಡಿ.ಎಮ್.ಸಿ ಅಧ್ಯಕ್ಷ ಬಸಪ್ಪ ನೇಮಗೌಡರ, ಉಪಾಧ್ಯಕ್ಷ ಈರಪ್ಪ ಕಮತೆ, ಸಿ.ಆರ್.ಪಿ ಕೆ.ಎಲ್ ಮೀಶಿ, ಬಿಐಇಆರ್‍ಟಿಗಳಾದ ವಾಯ್ ಆರ್ ಮುಕ್ಕನ್ನವರ, ವಾಯ್ ಬಿ ಪಾಟೀಲ, ಪ್ರಧಾನ ಗುರುಗಳಾದ ಎಸ್.ವಿ ಸೋಮವ್ವಗೋಳ, ಎಮ್ ಮಂಜುನಾಥ, ಶಶಿಕಲಾ ಕುಲಕರ್ಣಿ, ಜಿ.ಬಿ ನಾಯಿಕ, ಹಣಮಂತ ಕೂಟುರ ಚನ್ನಬಸು ಸಾಮನೆ ಹಾಗೂ ವಲಯ ವ್ಯಾಪ್ತಿಯ ವಿಶೇಷ ಚೇತನ ಮಕ್ಕಳು ಹಾಗೂ ಪಾಲಕರು ಉಪಸ್ಥಿತರಿದ್ದರು.

Related posts: