RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಸಹೋದರಿ ನಿವೇದಿತಾಯಂತೆ ಪ್ರತಿಯೊಬ್ಬ ಮಹಿಳೆಗೂ ದೇಶದ ಮತ್ತು ಧರ್ಮದ ಬಗ್ಗೆ ಕಾಳಜಿ ಇರಬೇಕು : ಸಚಿವ ರಮೇಶ

ಗೋಕಾಕ:ಸಹೋದರಿ ನಿವೇದಿತಾಯಂತೆ ಪ್ರತಿಯೊಬ್ಬ ಮಹಿಳೆಗೂ ದೇಶದ ಮತ್ತು ಧರ್ಮದ ಬಗ್ಗೆ ಕಾಳಜಿ ಇರಬೇಕು : ಸಚಿವ ರಮೇಶ 

ಸಹೋದರಿ ನಿವೇದಿತಾಯಂತೆ ಪ್ರತಿಯೊಬ್ಬ ಮಹಿಳೆಗೂ ದೇಶದ ಮತ್ತು ಧರ್ಮದ ಬಗ್ಗೆ ಕಾಳಜಿ ಇರಬೇಕು : ಸಚಿವ ರಮೇಶ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 28 : 

 
ವಿದೇಶದಲ್ಲಿ ಹುಟ್ಟಿದ್ದರೂ ಸಹ ಸಹೋದರಿ ನಿವೇದಿತಾ ಭಾರತೀಯ ಸಂಸ್ಕೃತಿ ಅಪ್ಪಿಕೊಂಡು ಆಧ್ಯಾತ್ಮಿಕ ಸಾಧನೆ ಮಾಡಿದರು ಎಂದು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌ ಹೇಳಿದರು.

ಬುಧವಾರದಂದು ನಗರದ ಸಚಿವರ ಗೃಹ ಕಚೇರಿಯಲ್ಲಿ ಭಗಿನಿ ನಿವೇದಿತಾ ಅವರ 153ನೇ ಜನ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು ತಾಯಿ ಭಾರತಾಂಬೆಯ ಪದತಲದಲ್ಲಿ ಸಮರ್ಪಿತಗೊಂಡ ಶ್ರೇಷ್ಠ ಪುಷ್ಪವೇ ಭಗಿನಿ ನಿವೇದಿತಾ ಎಂದರು.

ಭಾರತೀಯರ ಸೇವೆ ಮತ್ತು ಆಧ್ಯಾತ್ಮಿಕ ಚಿಂತನೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟಂತಹಾ ಸಹೋದರಿ ನಿವೇದಿತಾ, ಸ್ವಾಮಿ ವಿವೇಕಾನಂದರ ಮಾನಸ ಪುತ್ರಿಯಾಗಿದ್ದರು. ಅವರಂತೆ ಪ್ರತಿಯೊಬ್ಬ ಮಹಿಳೆಗೂ ದೇಶದ ಮತ್ತು ಧರ್ಮದ ಬಗ್ಗೆ ಕಾಳಜಿ ಇರಬೇಕು. ಆಗ ನಮ್ಮ ದೇಶ ವಿಶ್ವಕ್ಕೇ ಮಾರ್ಗದರ್ಶನ ಮಾಡುವಂತಾಗುತ್ತದೆ ಎಂದು ಸಚಿವ ಜಾರಕಿಹೊಳಿ‌ ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Related posts: