RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಅಶೋಕ ಪೂಜಾರಿ ಮನವಲಿಸಲು ಗೋಕಾಕಕ್ಕೆ ದೌಡಾಯಿಸಿದ ಕೇಂದ್ರ ರೈಲ್ವೆ ಸಚಿವ ಅಂಗಡಿ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ

ಗೋಕಾಕ:ಅಶೋಕ ಪೂಜಾರಿ ಮನವಲಿಸಲು ಗೋಕಾಕಕ್ಕೆ ದೌಡಾಯಿಸಿದ ಕೇಂದ್ರ ರೈಲ್ವೆ ಸಚಿವ ಅಂಗಡಿ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ 

ಅಶೋಕ ಪೂಜಾರಿ ಮನವಲಿಸಲು ಗೋಕಾಕಕ್ಕೆ ದೌಡಾಯಿಸಿದ ಕೇಂದ್ರ ರೈಲ್ವೆ ಸಚಿವ ಅಂಗಡಿ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 16 :

 

ಉಪ ಚುನಾವಣೆ ಸಮಿಪಿಸುತ್ತಿದ್ದಂತೆ ನಗರದಲ್ಲಿ ರಾಜಕೀಯ ಚುಟುವಟಿಕೆಗಳು ಗರಿಗದರುತ್ತಿದ್ದು , ಬಿಜೆಪಿಯ ಅಶೋಕ ಪೂಜಾರಿ ಮನವಲಿಸಲು ಕೇಂದ್ರ ಸಚಿವ ಸುರೇಶ ಅಂಗಡಿ ಮತ್ತು ಬಿಜಿಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಅಶೋಕ ಪೂಜಾರಿ ಅವರ ಮನೆಗೆ ದಿಢೀರ್ ಭೇಟಿ ನೀಡಿದ ಪ್ರಸಂಗ ಚರ್ಚೆಗೆ ಗ್ರಾಸ ಒದಗಿಸಿದೆ

ಶನಿವಾರ ಮಧ್ಯಾಹ್ನವಷ್ಟೆ ಬೆಂಬಲಿಗರ ಸಭೆ ನಡೆಯಿಸಿ ತಮ್ಮ ನಿರ್ಧಾರವನ್ನು ಕಾಯ್ದಿರಿಸಿದ್ದ ಅಶೋಕ ಪೂಜಾರಿಗೆ ಬಿಜೆಪಿ ಪಕ್ಷದ ಮುಖಂಡರು ಚುನಾವಣೆಗೆ ನಿಲ್ಲದೆ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡರು ಬಿಜೆಪಿ ಕಾರ್ಯಕರ್ತರನ್ನು ಹೊರಗೆ ಬಿಟ್ಟು ಚಿಲಕ ಹಾಕಿ ಸಭೆ ಮಾಡಿದ ‌ಸಚಿವರಿಗೆ ಮಾಜಿ ಶಾಸಕ ವಿಶ್ವನಾಥ ಪಾಟೀಲ್, ಗೋಕಾಕ ಚುನಾವಣಾ ಉಸ್ತುವಾರಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಸ್ವತ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಸಾಥ್ ನೀಡಿದರು

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ ಅಂಗಡಿ ಪಕ್ಷದ ಮುಖಂಡರು ಸೇರಿ ಅಶೋಕ ಪೂಜಾರಿ ಅವರೊಂದಿಗೆ ಚರ್ಚಿಸಿದ್ದು , ನಾಳೆ ಸಂಜೆಯ ಒಳಗೆ ಅವರು ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಕಾರ್ಯ ಮಾಡುತ್ತಾರೆಂಬ ಆಶಾಭಾವನೆ ವ್ಯಕ್ತ ಪಡಿಸಿದವರು
ಅಶೋಕ ಪೂಜಾರಿ ನನ್ನ ಸ್ನೇಹಿತ : ಅಶೋಕ ಪೂಜಾರಿ ಅವರು ನನಗೆ ಒಳ್ಳೆಯ ಸ್ನೇಹಿತ ಅವರು ನಾಳೆ ನಿರ್ಧಾರ ತಿಳಿಸುವದಾಗಿ ಹೇಳಿದ್ದಾರೆ ‌ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲು ಪ್ರಯತ್ನಿಸುವುದಾಗಿ ತಿಳಿಸಿರಲ್ಲದೆ ಅಶೋಕ ಪೂಜಾರಿ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವರೆಂಬ ವಿಶ್ವಾಸವಿದೆ ಎಂದು ರಮೇಶ ಜಾರಕಿಹೊಳಿ ಹೇಳಿದರು
ಒಟ್ಟಾರೆ ಅಶೋಕ ಪೂಜಾರಿ ಅವರ ಮನವಲಿಸಲು ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದು ಅವರು ತಮ್ಮ ನಿಲುವು ಪ್ರಕಟಿಸಿದೆ ಗುಟ್ಟಾಗಿ ಇಟ್ಟಿಕೊಂಡಿದ್ದು ನಾಳೆವರೆಗೆ ಕಾಯಬೇಕಾಗಿದೆ .

Related posts: