ಗೋಕಾಕ:5 ಲಕ್ಷ ಪರಿಹಾರ ಧನವನ್ನು 10 ಲಕ್ಷಕ್ಕೆ ಏರಿಸಲು ಮುಖ್ಯಮಂತ್ರಿಗಳಿಗೆ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ. ಒತ್ತಾಯ

5 ಲಕ್ಷ ಪರಿಹಾರ ಧನವನ್ನು 10 ಲಕ್ಷಕ್ಕೆ ಏರಿಸಲು ಮುಖ್ಯಮಂತ್ರಿಗಳಿಗೆ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ.
ಒತ್ತಾಯ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 20 :
ನೆರೆ ಸಂತ್ರಸ್ತರಿಗೆ ವಸತಿ ಕಲ್ಪಿಸಲು ಪರಿಹಾರ ಧನವನ್ನು 5 ಲಕ್ಷ ದಿಂದ 10 ಲಕ್ಷಕ್ಕೆ ಏರಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗುವದು ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು
ಮಂಗಳವಾರದಂದು ನಗರದ ನೆರೆ ಹಾನಿಗೋಳಗಾದ ಪ್ರದೇಶಗಳಿಗೆ ಶಾಸಕ ಸತೀಶ ಜಾರಕಿಹೊಳಿ ಮತ್ತು ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಅವರೊಂದಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವಾನ ಹೇಳುತ್ತಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ,ಸತೀಶ ಜಾರಕಿಹೊಳಿ ಮತ್ತು ನಾವು ಸಂತ್ರಸ್ತರಿಗೆ ಪುನರ್ವಸತಿಗೆ ನೀಡಲಾಗುವ ಪರಿಹಾರವನ್ನು 10 ಲಕ್ಷಕ್ಕೆ ಏರಿಸುವಂತೆ ಒತ್ತಾಯಿಸುತ್ತೇವೆ.ನಿಮ್ಮ ಬದುಕನ್ನು ಪುನರನಿರ್ಮಿಸಲು ಎಲ್ಲ ರೀತಿಯ ಸಹಾಯ ಸಹಕಾರದೊಂದಿಗೆ ಹೋರಾಟ ಮಾಡುತ್ತೆವೆ ಧೈರ್ಯದಿಂದ ಇರಲು ಸಂತ್ರಸ್ತರಿಗೆ ಹೇಳಿದ ಅವರು ನಿಮ್ಮ ನೆರೆವಿಗೆ ಸದಾ ನಾವಿರುವದಾಗಿ ತಿಳಿಸಿದರು
ಈ ಸಂದರ್ಭದಲ್ಲಿ ಮಾಜಿ ಸಚಿವ ವಿರಕುಮಾರ ಪಾಟೀಲ್ , ವಿನಯ ನಾವಲಗಟ್ಟಿ , ಲಕ್ಷ್ಮಣರಾವ್ ಚಂಗಳೆ, ಜಿ.ಪಂ ಉಪಾಧ್ಯಕ್ಷ ಅರುಣ ಕಟಕಾಂಬ್ಳೆ , ಬಸವರಾಜ ಸಾಯನ್ನವರ , ಭಗವಂತ ಹುಳ್ಳಿ, ರಿಯಾಜ ಚೌಗಲಾ,ಶಿವು ಪಾಟೀಲ, ಸದಾನಂದ ಕಲಾಲ ಸೇರಿದಂತೆ ಇತರರು ಇದ್ದರು .