RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ನೆರೆ ಸಂತ್ರಸ್ಥರಿಗೆ ಬೆಳಗಾವಿ ತೆಲಸಂಗ ಟ್ರಾವೆಲ್ಸ್ ವತಿಯಿಂದ ದಿನನಿತ್ಯ ಬಳಕೆಯ ಸಾಮಗ್ರಿಗಳ ವಿತರಣೆ

ಗೋಕಾಕ:ನೆರೆ ಸಂತ್ರಸ್ಥರಿಗೆ ಬೆಳಗಾವಿ ತೆಲಸಂಗ ಟ್ರಾವೆಲ್ಸ್ ವತಿಯಿಂದ ದಿನನಿತ್ಯ ಬಳಕೆಯ ಸಾಮಗ್ರಿಗಳ ವಿತರಣೆ 

ನೆರೆ ಸಂತ್ರಸ್ಥರಿಗೆ ಬೆಳಗಾವಿ ತೆಲಸಂಗ ಟ್ರಾವೆಲ್ಸ್ ವತಿಯಿಂದ ದಿನನಿತ್ಯ ಬಳಕೆಯ ಸಾಮಗ್ರಿಗಳ ವಿತರಣೆ

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 11 :

 

 
ನೆರೆ ಸಂತ್ರಸ್ಥರಿಗೆ ಬೆಳಗಾವಿ ತೆಲಸಂಗ ಟ್ರಾವೆಲ್ಸ್ ವತಿಯಿಂದ ದಿನನಿತ್ಯ ಬಳಕೆಯ ಸಾಮಗ್ರಿಗಳನ್ನು ಇಲ್ಲಿಯ ಕುರುಬರ ದಡ್ಡಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಟ್ರಾವೇಲ್ಸ್ ಮಾಲಿಕರಾದ ಪ್ರದೀಪ ತೆಲಸಂಗ ಅವರು ವಿತರಿಸಿದರು.
ಇದಕ್ಕೂ ಮೊದಲು ಹುಕ್ಕೇರಿ ತಾಲೂಕಿನ ಹೊಸುರ, ನದಿಗುಡಿಕೇತರ, ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣ ವಿತರಿಸಿ, ಗೋಕಾಕ ನಗರದ ರೇಷ್ಮೆ ಇಲಾಖೆ ಹತ್ತಿರ ತೆರೆ ಗಂಜಿ ಕೇಂದ್ರದಲ್ಲಿ ಹಾಗೂ ಮೆಳವಂಕಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ಗ್ರಾಮಗಳ ನಿರಾಶ್ರಿತರ ಗಂಜಿ ಕೇಂದ್ರಗಳಾದ ಪಾರನಟ್ಟಿ, ಬೆಣಚಿನಮರಡಿಯಲ್ಲಿರುವ ಗಂಜಿ ಕೇಂದ್ರಗಳಿಗೆ ತೆರಳಿ ಹೊದಿಕೆಗಳನ್ನು ಬಟ್ಟೆಗಳನ್ನು ಹಾಗೂ ದಿನನಿತ್ಯ ಬಳಕೆಯ ಸಾಮಗ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಯೂರ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಸದಾನಂದ ಕಲಾಲ, ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ವಾಯ್.ಬಿ.ಕುರಬಗಟ್ಟಿ, ಚಂದ್ರಶೇಖರ ತೆಲಸಂಗ, ಅರುಣ ತೆಲಸಂಗ, ಗಜಾನನ ಗುಂಜೇರಿ, ನಾಗರಾಜ ಹೂಗಾರ, ಲೋಹಿತ ಮುರಕರ, ಮಾರುತಿ ಕೊಳೆಕರ, ಅನೀಲ ಮಲಕ್ಕನ್ನವರ ಸೇರಿದಂತೆ ಅನೇಕರು ಇದ್ದರು.

Related posts: