RNI NO. KARKAN/2006/27779|Sunday, August 3, 2025
You are here: Home » breaking news » ಮೂಡಲಗಿ :ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪತ್ರಿಕೆಯು ಪ್ರಮುಖ ಪಾತ್ರವಹಿಸಿದೆ : ಡಾ. ರಂಗಣ್ಣ ಸೋನವಾಲ್ಕರ

ಮೂಡಲಗಿ :ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪತ್ರಿಕೆಯು ಪ್ರಮುಖ ಪಾತ್ರವಹಿಸಿದೆ : ಡಾ. ರಂಗಣ್ಣ ಸೋನವಾಲ್ಕರ 

ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪತ್ರಿಕೆಯು ಪ್ರಮುಖ ಪಾತ್ರವಹಿಸಿದೆ : ಡಾ. ರಂಗಣ್ಣ ಸೋನವಾಲ್ಕರ
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಜು 8 :

 

ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗವು ಅಸ್ತವ್ಯಸ್ಥವಾದಾಗ ಸರಿಯಾದ ದಿಕ್ಕಿನತ್ತ ಸಾಗುವಂತೆ ಮಾಡುವ ಜವಾಬ್ದಾರಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗಕ್ಕಿದೆ. ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪತ್ರಿಕೆಯು ಪ್ರಮುಖ ಪಾತ್ರವಹಿಸಿದೆ ಎಂದು ಶ್ರೀ ಶ್ರೀನಿವಾಸ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಡಾ. ರಂಗಣ್ಣ ಸೋನವಾಲ್ಕರ ಹೇಳಿದರು.

ಅವರು ಸ್ಥಳೀಯ ಶ್ರೀ ಶ್ರೀನಿವಾಸ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಶ್ರೀನಿವಾಸ ಶಾಲೆಯಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರಿಗೆ ಸತ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ಪತ್ರಿಕಾರಂಗವು ಪ್ರಜಾಪ್ರಭುತ್ವ ದೇಶದ ಆಧಾರ ಸ್ತಂಭವಾಗಿದೆ. ಪತ್ರಿಕಾರಂಗವೂ ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗದೇ ಸಮಾಜದ ಎಲ್ಲ ಅಂಕುಡೊಂಕುಗಳನ್ನು ತಿದ್ದಿ ಸಮಾಜದ ಅಭಿವೃದ್ದಿಗೆ ಸ್ಪಂದಿಸುತ್ತಿದೆ ಎಂದರು.

ಪತ್ರಕರ್ತ ಬಾಲಶೇಖರ ಬಂಧಿ ಮಾತನಾಡಿ, ಸಮಾಜ ಸುಧಾರಣೆಗಾಗಿ ಶ್ರಮಿಸುತ್ತಿರುವ ಪತ್ರಕರ್ತರಿಗೆ ಸಮಾಜದಲ್ಲಿ ಗೌರವ ನೀಡುವುದು ಎಲ್ಲರ ಕರ್ತವ್ಯವಾಗಿದೆ. ಶ್ರೀ ಶ್ರೀನಿವಾಸ ಶಿಕ್ಷಣ ಸಂಸ್ಥೆಯೂ ಪತ್ರಕರ್ತರನ್ನು ಸನ್ಮಾನಿಸಿರುವುದು ಸಂತಸ ತಂದಿದೆ. ತಂತ್ರಜ್ಞಾನದ ಇಂದಿನ ಯುಗದಲ್ಲಿ ಜಗತ್ತು ಜಾಲಾಡಿಸುವ ಅಂತರ್ಜಾಲವಿದ್ದರೂ ಪತ್ರಿಕೆ ಓದಿದಾಗ ದೊರೆಯುವ ಸಮಾಧಾನ ಅಂತರ್ಜಾಲದಲ್ಲಿ ಸಿಗುವುದಿಲ್ಲ. ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು. ಸಂಸ್ಥೆಯ ಅಧ್ಯಕ್ಷ ರಂಗಣ್ಣ ಸೋನವಾಲ್ಕರ ತಾನು ಕಲಿತ ಊರಿಗೆ ಕೊಡುಗೆ ನೀಡುವ ಉದ್ದೇಶದಿಂದ ಶಿಕ್ಷಣ ಸಂಸ್ಥೆ ಪ್ರಾರಂಭಿಸಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಈ ಶಿಕ್ಷಣ ಸಂಸ್ಥೆಯೂ ವಿದ್ಯಾರ್ಥಿಗಳಿಗೆ ಪರಿಪೂರ್ಣತೆಯಿಂದ ಕೂಡಿದ ಉತ್ತಮ ಶಿಕ್ಷಣ ನೀಡುವುದರಲ್ಲಿ ಸಂಶಯವಿಲ್ಲ ಎಂದರು.

ಪ್ರಾಂಶುಪಾಲರಾದ ಮನೋಜ ಭಟ್ ಪ್ರಸ್ತಾವಿಕವಾಗಿ ಮಾತನಾಡಿ, ಸಮಾಜದ ಮೂರನೇ ಕಣ್ಣಾದ ಪತ್ರಿಕಾರಂಗ ಸಮಾಜ ಸುಧಾರಣಾ ಕಾರ್ಯ ಮಾಡುತ್ತಿದೆ. ದಾಖಲೆಗಳಿಗಾಗಿ ಮುದ್ರಣ ಮಾಧ್ಯಮವೂ ಬಹು ಮುಖ್ಯವಾಗಿದೆ. ಸಮಾಜದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಎಲ್ಲರಿಗೂ ತಲುಪಿಸುವ ಕಾರ್ಯವನ್ನು ಪತ್ರಿಕೆಗಳು ಮಾಡುತ್ತಿದೆ. ಎಲೆಮರೆಯ ಕಾಯಿಯಂತೆ ಸಮಾಜ ಕಾರ್ಯಗಳನ್ನು ಮಾಡುವ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಪತ್ರಕರ್ತರು ಮಾಡಬೇಕಾಗಿದೆ ಎಂದರು.

ಸಾಹಿತಿ ಉಮೇಶ ಬೆಳಕೊಡ ಮಾತನಾಡಿ, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡದ ಪರಿಸರವನ್ನು ನಿರ್ಮಾಣ ಮಾಡಬೇಕು. ಆಧ್ಯಾತ್ಮಿಕದ ಕಡೆಗೆ ಹೆಚ್ಚು ಒಲವು ನೀಡಿ ಭಾರತೀಯ ಸಂಸ್ಸøತಿಯನ್ನು ಉಳಿಸುವ ಕಾರ್ಯವಾಗಬೇಕು ಎಂದರು.
ಪತ್ರಕರ್ತರಾದ ಎಲ್.ವಾಯ್ ಅಡಿಹುಡಿ, ಶಿವಾನಂದ ಮರಾಠೆ ಮಾತನಾಡಿದರು.
ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ ಪಾಟೀಲ, ಸುಧಾಕರ ಉಂದ್ರಿ ವೇದಿಕೆಯಲ್ಲಿದ್ದರು.

ತಾಲೂಕಿನ ಸರ್ವ ಪತ್ರಕರ್ತರನ್ನು ಸಂಸ್ಥೆಯ ಅಧ್ಯಕ್ಷ ಡಾ. ರಂಗಣ್ಣ ಸೋನವಾಲ್ಕರ ಶಾಲು ಹೊದಿಸಿ, ಸವಿನೆನಪಿನ ಕಾಣಿಕೆ ನೀಡಿ ಸತ್ಕರಿಸಿದರು.

ಕಾರ್ಯಕ್ರಮದಲ್ಲಿ ಅಬ್ದುಲ ಬಾಗವಾನ, ಪತ್ರಕರ್ತರಾದ ಶಿವಾನಂದ ಮುಧೋಳ, ಸುಭಾಸ ಗೊಡ್ಯಾಗೋಳ, ಸುಧೀರ ನಾಯರ್, ಅಲ್ತಾಫ್ ಹವಾಲ್ದಾರ, ಶಿವಾನಂದ ಮರಾಠೆ, ಶಿವಬಸು ಗಾಡವಿ, ಭಗವಂತ ಉಪ್ಪಾರ, ಮಹಾಲಿಂಗ ಗೊಡ್ಯಾಗೋಳ, ರಾಜಶೇಖರ ಮಗದುಮ್, ಜಿ.ಬಿ.ಹುಂಡೆಕರ, ಶಿಕ್ಷಕಿಂiÀiರಾದ ಶರ್ಮಿಳ, ಚಂದ್ರಿಕಾ, ವಿದ್ಯಾ ಹೆಗ್ಡೆ, ಕಾವ್ಯ ಮಡಿವಾಳ, ಶ್ವೇತಾ, ಗಾಯಿತ್ರಿ, ಸಿಖಂದರ, ಬಸವರಾಜ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕಿ ಮಧುರ ವಾಜೆ ನಿರೂಪಿಸಿ, ವಂದಿಸಿದರು.

Related posts: