ಗೋಕಾಕ:ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಜಾಗೃತಾ ಜಾಥಾ

ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಜಾಗೃತಾ ಜಾಥಾ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 24 :
ದಿ. 28 ಮತ್ತು 29 ರಂದು ನಗರದ ಕೆಎಲ್‍ಇ ಶಾಲಾ ಆವರಣದಲ್ಲಿ ನಡೆಯಲಿರುವ ಬೆಳಗಾವಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ದಿ. 26 ರಂದು ಮಧ್ಯಾನ್ಹ 3 ಗಂಟೆಗೆ ನಗರದ ಕೊಳವಿ ಹಣಮಂತ ದೇವರ ದೇವಸ್ಥಾನದಿಂದ ಜಾಗೃತಾ ಜಾಥಾ ಹಮ್ಮಿಕೊಳ್ಳಲಾಗಿದೆ.
ಸೋಮವಾರದಂದು ನಗರದ ಕೆಎಲ್‍ಇ ಶಾಲಾ ಆವರಣದಲ್ಲಿ ಸ್ವಾಗತಿ ಸಮಿತಿಯ ಪದಾಧಿಕಾರಿಗಳು ಹಾಗೂ ನಗರ ಸಭೆ ಸದಸ್ಯರು ನಡೆಸಿದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಈ ಜಾಗೃತ ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಗೋಳ್ಳಿ ರಾಯಣ್ಣ ವೃತ್ತ ಮೂಲಕ ಬಸವೇಶ್ವರ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ. ಈ ಜಾಥಾದಲ್ಲಿ ತಾಲೂಕಿನ ಕನ್ನಡಾಭಿಮಾನಿಗಳು, ಸಂಘಟನೆಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸ್ವಾಗತ ಸಮಿತಿ ಕಾರ್ಯದರ್ಶಿ ಮಹಾಂತೇಶ ತಾವಂಶಿ ತಿಳಿಸಿದ್ದಾರೆ.
ಸಭೆಯಲ್ಲಿ ಪ್ರೋ, ಚಂದ್ರಶೇಖರ ಅಕ್ಕಿ, ಅಶೋಕ ಪೂಜಾರಿ, ಎಸ್.ಎ.ಕೋತವಾಲ, ಮಹಾಲಿಂಗ ಮಂಗಿ, ಸಿದ್ದಲಿಂಗ ದಳವಾಯಿ,ವಸಂತ ಕುಲಕರ್ಣಿ, ನಗರ ಸಭೆ ಸದಸ್ಯರು ಹಾಗೂ ಪದಾಧಿಕಾರಿಗಳು ಇದ್ದರು.