ಗೋಕಾಕ:ಗಿಳಿಹೊಸೂರ ಗ್ರಾಮಕ್ಕೆ ಆವರಿಸಿದ ಚಿಕನಗುನ್ಯಾ ವೈರಾಣನನ್ನು ತಡೆಯುವಂತೆ ಆಗ್ರಹಿಸಿ ಕರವೇ ಹೋರಾಟ

ಗಿಳಿಹೊಸೂರ ಗ್ರಾಮಕ್ಕೆ ಆವರಿಸಿದ ಚಿಕನಗುನ್ಯಾ ವೈರಾಣನನ್ನು ತಡೆಯುವಂತೆ ಆಗ್ರಹಿಸಿ ಕರವೇ ಹೋರಾಟ
ಗೋಕಾಕ ಜೂ 17 : ಗಿಳಿಹೊಸೂರ ಗ್ರಾಮಕ್ಕೆ ಆವರಿಸಿದ ಚಿಕನಗುನ್ಯಾ ವೈರಾಣನನ್ನು ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಯಿಸಿದರು
ಮಂಗಳವಾರ ಮುಂಜಾನೆ ನಗರದ ಸಾರ್ವಜನಿಕರು ಆಸ್ವತ್ರೆ ಎದುರು ಸೇರಿದ ಕರವೇ ಕಾರ್ಯಕರ್ತರು ಆರೋಗ್ಯ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಆಸ್ವತ್ರೆಯ ವೈದ್ಯಾಧಿಕಾರಿ ಡಾ.ಮಹೇಶ ಕೋಣಿ ಅವರ ಮುಖಾಂತರ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಅರ್ಪಿಸಿದರು
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಕಳೆದ ಸುಮಾರು 6 ತಿಂಗಳಿನಿಂದ ಹೆಚ್ಚು ಕಾಲ ಗೋಕಾಕ ತಾಲೂಕಿನ ಖನಗಾಂವ ಪಂಚಾಯತಿ, ಖನಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಗಿಳಿಹೊಸೂರ ಗ್ರಾಮದಲ್ಲಿ ಬರುವ ಸುಮಾರು 400 ಮನೆಗಳಲ್ಲಿ ಚಿಕನಗುನ್ಯ ವೈರಾಣುವಿನಿಂದ ಬಳಲುತ್ತಿದ್ದಾರೆ. ಹೀಗೆ ಚಿಕನಗುನ್ಯ ವೈರಾಣುವಿಗೆ ತುತ್ತಾದ ಜನರು ಸಂಧಿವಾತ, ವಿಪರೀತವಾದ ಮೊಣಕಾಲು ನೋವಿನಿಂದ ಬಳಲಿ ನಡೆಯಲು ಆಗದೇ ತುಂಬಾ ತೊಂದರೆಯನ್ನು ಪಡುತ್ತಿದ್ದಾರೆ. ಹೀಗೆ ಚಿಕನಗುನ್ಯಗೆ ತುತ್ತಾದ ರೋಗಿಗಳು ಚಿಕಿತ್ಸೆಗಾಗಿ ಖನಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರೆ ಕೇಂದ್ರದಲ್ಲಿ ರಕ್ತ ತಪಾಸಣೆ ಮಾಡುವವರಿಲ್ಲದೇ, ಸರಿಯಾಗಿ ಚಿಕಿತ್ಸೆ ನೀಡುವವರಿಲ್ಲದೇ ಜನರು ಈ ಸಂಕಷ್ಟದ ಸ್ಥಿತಿಯಿಂದ ಪಾರಾಗಲು ಪರಿತಪ್ಪಿಸುತ್ತಿದ್ದಾರೆ. ಈ ಪ್ರಕರಣಗಳು ದಿನೇ ದಿನೇ ಹೆಚ್ಚಿದರೂ ಸಹ ಇದನ್ನು ತಡೆಗಟ್ಟಲು ಆರೋಗ್ಯ ಇಲಾಖೆಯಾಗಲೀ, ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳಾಗಲೀ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಇದರಿಂದ ಚಿಕನಗುನ್ಯ ವೈರಾಣುವಿಗೆ ಬಲಿಯಾದ ಗ್ರಾಮದ ಅರ್ಧದಷ್ಟು ಜನರು ವಿಪರೀತ ಮೊಣಕಾಲು ನೋವಿನಿಂದ ನಡೆಯಲು ಆಗದೇ, ಸೂಕ್ತ ಚಿಕಿತ್ಸೆ ದೊರೆಯದೇ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ.
ಇದರ ಬಗ್ಗೆ ಕಳೆದ ಮೇ 30ರಂದು ಗೋಕಾಕನಲ್ಲಿ ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಕೆ.ಡಿ.ಪಿ. ಸಭೆಯಲ್ಲಿ ಸಚಿವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಜರುಗಿಸಬೇಕೆಂದು ಆರೋಗ್ಯ ಇಲಾಖೆಗೆ ಮೌಖಿಕವಾಗಿ ಆದೇಶ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ದಯಾಳುಗಳಾದ ತಾವುಗಳು ಈ ಪ್ರಕರಣವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಿ ಚಿಕನಗುನ್ಯ ವೈರಾಣುವಿಗೆ ತುತ್ತಾಗಿ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಗಿಳಿಹೊಸೂರ ಗ್ರಾಮವನ್ನು ಚಿಕನಗುನ್ಯ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ಖಾನಪ್ಪನವರ ಆಗ್ರಹಿಸಿದರು
ಈ ಸಂದರ್ಭದಲ್ಲಿ ಕೃಷ್ಣಾ ಖಾನಪ್ಪನವರ , ಸಾದಿಕ ಹಲ್ಯಾಳ , ಮಂಜುನಾಥ ಪ್ರಭುನಟ್ಟಿ , ಮುಗುಟ ಪೈಲವಾನ , ಅಶೋಕ ಬಂಡಿವಡ್ಡರ , ರೆಹಮಾನ ಮೊಕಾಶಿ , ರಮೇಶ ಕಮತಿ , ಶೆಟ್ಟೆಪ್ಪಾ ಗಾಡಿವಡ್ಡರ , ಕೆಂಪಣ್ಣಾ ಕಡಕೋಳ , ರಮೇಶ ನಾಕಾ, ಬಸು ಗಾಡಿವಡ್ಡರ , ಸುರೇಶ ಪತ್ತಾರ , ದುರ್ಗಪ್ಪಾ ಬಂಡಿವಡ್ಡರ , ಹಣಮಂತ ಕಮತಿ , ಅಪ್ಪಯ್ಯ ತಿಗಡಿ , ಯಶವಂತ ಗ್ಯಾನಪ್ಪನವರ , ಮಹಾದೇವ ಮಕ್ಕಳಗೇರಿ , ಮುತ್ತೇಪ್ಪಾ ಘೋಡಗೇರಿ , ಕಿರಣ ತೊಗರಿ , ರಾಜು ಪಾಮನಾಯ್ಕ , ಯಲ್ಲಪ್ಪಾ ಧರ್ಮಟ್ಟಿ , ಲಕ್ಕಪ್ಪಾ ನಂದಿ , ಹಣಮಂತ ಅಮ್ಮಣಗಿ , ರಫೀಕ ಗುಳ್ಳೆದಗುಡ್ಡ , ಶಾನೂಲ ನಾಯ್ಕ , ಅಜ್ಜರುದ್ದೀನ ಚೌದರಿ , ಸಾಗರ ಮದಿಹಳ್ಳಿ ,ಗುರು ಮುನ್ನೋಳಿಮಠ , ರಮೇಶ ಬಂಡಿವಡ್ಡರ , ಸುರೇಶ ಬಂಡಿವಡ್ಡರ , ಸಂತೋಷ ಬಂಡಿವಡ್ಡರ , ರಾಜು ಬಂಡಿವಡ್ಡರ , ಸಿದ್ರಾಂ ಬಂಡಿವಡ್ಡರ , ಗುರುನಾಥ ದರ್ಶನ , ಅಮೀರಖಾನ ಜಗದಾಳೆ ಈರಣ್ಣಾ ನರಸಣ್ಣವರ , ಶಂಕರ ಗಾಡಿವಡ್ಡರ , ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು