RNI NO. KARKAN/2006/27779|Sunday, February 15, 2026
You are here: Home » breaking news » ಗೋಕಾಕ:ಕೆಎಮ್‍ಎಫ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಅಮರನಾಥ ಜಾರಕಿಹೊಳಿ ಅವರಿಗೆ ಸನ್ಮಾನ

ಗೋಕಾಕ:ಕೆಎಮ್‍ಎಫ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಅಮರನಾಥ ಜಾರಕಿಹೊಳಿ ಅವರಿಗೆ ಸನ್ಮಾನ 

ಕೆಎಮ್‍ಎಫ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಅಮರನಾಥ ಜಾರಕಿಹೊಳಿ ಅವರಿಗೆ ಸನ್ಮಾನ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 2 :
ಕೆಎಮ್‍ಎಫ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಪುತ್ರ ಅಮರನಾಥ ಅವರನ್ನು ಗುರುವಾರದಂದು ಸತ್ಕರಿಸಲಾಯಿತು.
ಶಾಸಕ ರಮೇಶ ಜಾರಕಿಹೊಳಿ ಅವರ ಕಾರ್ಯಾಲಯದಲ್ಲಿ ಗೋಕಾಕ ಹಾಗೂ ಅರಭಾಂವಿ ಮತಕ್ಷೇತ್ರದ ವಿವಿಧ ಗ್ರಾಮಗಳ ಮುಖಂಡರು, ಜನಪ್ರತಿನಿಧಿಗಳು, ಬೆಂಬಲಿಗರು, ಅಭಿಮಾನಿಗಳು ತಂಡೋಪ ತಂಡವಾಗಿ ಆಗಮಿಸಿ ಅಮರನಾಥ ಅವರನ್ನು ಸತ್ಕರಿಸಿ ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಅಥಣಿ ಶಾಸಕ ಮಹೇಶ ಕುಮಟಳ್ಳಿ ಹಾಗೂ ಎಮ್‍ಎಲ್‍ಸಿ ವಿವೇಕರಾವ ಪಾಟೀಲ ಅವರು ಕೂಡಾ ಸತ್ಕರಿಸಿ ಅಭಿನಂದಿಸಿದರು.

Related posts: