RNI NO. KARKAN/2006/27779|Saturday, February 14, 2026
You are here: Home » breaking news » ಘಟಪ್ರಭಾ:ಮತದಾನ ಯಂತ್ರದಲ್ಲಿ ತಾಂತ್ರಿಕ ದೋಷ ಅರ್ಧ ಘಂಟೆಗೂ ಹೆಚ್ಚು ಕಾಲ ಕಾದ ಮತದಾರರು

ಘಟಪ್ರಭಾ:ಮತದಾನ ಯಂತ್ರದಲ್ಲಿ ತಾಂತ್ರಿಕ ದೋಷ ಅರ್ಧ ಘಂಟೆಗೂ ಹೆಚ್ಚು ಕಾಲ ಕಾದ ಮತದಾರರು 

ಮತದಾನ ಯಂತ್ರದಲ್ಲಿ ತಾಂತ್ರಿಕ ದೋಷ ಅರ್ಧ ಘಂಟೆಗೂ ಹೆಚ್ಚು ಕಾಲ ಕಾದ ಮತದಾರರು

ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಸುದ್ದಿ ,ಏ 23 :

 

ಮಲ್ಲಾಪೂರ ಪಿ.ಜಿ ಪಟ್ಟಣದ ಸರ್ಕಾರಿ ಉರ್ದು ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 30 ರಲ್ಲಿ ಮಧ್ಯಾಹ್ಮ 2.30 ಗಂಟೆಗೆ ಮತದಾನ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಸುಮಾರು ಅರ್ಧ ಘಂಟೆಗೂ ಹೆಚ್ಚು ಕಾಲ ಮತದಾರರು ತಮ್ಮ ಮತಚಲಾಯಿಸಲು ಬಿಸಿಲಿನಲ್ಲಿ ಕಾಯಬೇಕಾಯಿತು. ಮತಯಂತ್ರವನ್ನು ದುರಸ್ತಿಗೊಳಿಸಿದ ಅಧಿಕಾರಿಗಳು ಮರು ಮತದಾನ ಪ್ರಾರಂಭಿಸಿದರು.
ಸಮೀಪದ ಪಾಮಲದಿನ್ನಿಯಲ್ಲಿ ಕೂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 36 ರಲ್ಲಿನ ಮತದಾನ ಯಂತ್ರದಲ್ಲಿ ಎರಡು ಬಾರಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತಗೊಂಡ ನಂತ ಮತ್ತೆ ಪ್ರಾರಂಭಿಸಲಾಗಿದೆ ಎಂದು ತಿಳಿದು ಬಂದಿದೆ.

Related posts: