RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ನಾಳೆಯಿಂದ ಎರೆಡು ದಿನಗಳ ಕಾಲ ಹುಣಶ್ಯಾಳ ಪಿ.ಜಿ. ಗ್ರಾಮದ ಶಕ್ತಿದೇವತೆ ಶ್ರೀ ದುರ್ಗಾದೇವಿ ಜಾತ್ರೆ

ಗೋಕಾಕ:ನಾಳೆಯಿಂದ ಎರೆಡು ದಿನಗಳ ಕಾಲ ಹುಣಶ್ಯಾಳ ಪಿ.ಜಿ. ಗ್ರಾಮದ ಶಕ್ತಿದೇವತೆ ಶ್ರೀ ದುರ್ಗಾದೇವಿ ಜಾತ್ರೆ 

ನಾಳೆಯಿಂದ ಎರೆಡು ದಿನಗಳ ಕಾಲ ಹುಣಶ್ಯಾಳ ಪಿ.ಜಿ. ಗ್ರಾಮದ ಶಕ್ತಿದೇವತೆ ಶ್ರೀ ದುರ್ಗಾದೇವಿ ಜಾತ್ರೆ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಪೆ 25 :

 

ದಿ .26 ಮತ್ತು 27 ರಂದು ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ಜಿ. ಗ್ರಾಮದ ಶಕ್ತಿದೇವತೆ ಶ್ರೀ ದುರ್ಗಾದೇವಿ ಜಾತ್ರೆ ವಿಜೃಂಭನೆಯಿಂದ ಜರುಗುವದು ಎಂದು ಜಾತ್ರಾ ಕಮಿಟಿಯ ಸಕಲ ಮುಖಂಡರು ತಿಳಿಸಿದ್ದಾರೆ

ಈ ಕುರಿತು ಪ್ರಕಟಣೆ ನೀಡಿರುವ ಅವರು ಮಂಗಳವಾರ ಮುಂಜಾನೆ ದೇವಿಗೆ ಅಭಿಷೇಕ, ಮಹಾಪೂಜೆ, ಸಂಜೆ ಪರಊರಿನಿಂದ ಬಂದಂತಹ ಹಿರೇನಂದಿ, ಚಿಕ್ಕನಂದಿ, ಮಮದಾಪೂರ, ಮೆಳವಂಕಿ, ಗೋಸಬಾಳ, ಗೊರಗುದ್ದಿ, ಮಾಲದಿನ್ನಿ, ಕೊಳವಿ, ಅರಭಾಂವಿ, ಶಿಂಧಿಕೂರಬೇಟ, ಕೊಣ್ಣೂರ, ಚಿಗಡೊಳ್ಳಿ ಗ್ರಾಮಗಳಿಂದ ಆಗಮಿಸಿದ ದೇವತೆಗಳನ್ನು ಸ್ವಾಗತ ಕೋರುವದು, ಊಡಿ ತುಂಬುವದು ರಾತ್ರಿ ನಾವಲಗಿ ಮತ್ತು ರಣ್ಣಬೆಳಗಲಿ ಮೇಳದವರಿಂದ ಚೌಡಕಿ ಪದಗಳು ಜರುಗುವದು ಬುಧವಾರ ಬೆಳಿಗ್ಗೆ 8.00 ಘಂಟೆಗೆ ಪಲ್ಲಕ್ಕಿ ಉತ್ಸವ ಆನೆ ಅಂಬಾರಿ ಮೆರವಣಿಗೆ ವಿವಿಧ ಕಲಾತಂಡಗಳಿಂದ ಡೊಳ್ಳು ಕುಣಿತ, ಬ್ಯಾಂಜೊ ಮೇಳ, ಹಲಗಿ ವಾದನ, ಕುದುರೆ ಕುಣಿತ, ದಟ್ಟಿ ಮೇಳ, ಚಿಕ್ಕಲದಿನ್ನಿ ಬ್ಯಾಂಡ ವಾದ್ಯಗಳೊಂದಿಗೆ ವೈಭವಪೂರಿತ ಕಾರ್ಯಕ್ರಮ ಜರುಗುವದು ಸಕಲ ಸದ್ದಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ

Related posts: