ಗೋಕಾಕ:ಕಾಶ್ಮೀರವನ್ನು ನರಕವನ್ನಾಗಿ ಮಾಡಿರುವ ಉಗ್ರಗಾಮಿಗಳ ವಿರುದ್ಧ ಸಂಘಟಿತ ಹೋರಾಟ ಅವಶ್ಯ : ಮೌಲಾನಾ ಬಸೀರುಲ್ ಹಕ್
ಕಾಶ್ಮೀರವನ್ನು ನರಕವನ್ನಾಗಿ ಮಾಡಿರುವ ಉಗ್ರಗಾಮಿಗಳ ವಿರುದ್ಧ ಸಂಘಟಿತ ಹೋರಾಟ ಅವಶ್ಯ : ಮೌಲಾನಾ ಬಸೀರುಲ್ ಹಕ್
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ.20 :
‘ಪಾಕಿಸ್ತಾನ ಮುರ್ದಾಬಾದ’ ಘೋಷಣೆಗಳೊಂದಿಗೆ ತಾಲೂಕಿನ ಮುಸ್ಲಿಂ ಸಮಾಜ ಬಾಂಧವರು ಜಮ್ಮು-ಕಾಶೀರದಲ್ಲಿ ನಡೆದ ಉಗ್ರಗಾಮಿಗಳ ಬಾಂಬ ಧಾಳಿಯಲ್ಲಿ 44 ಭಾರತೀಯ ಭಾರತೀಯ ಸೈನಿಕರ ಹತ್ಯೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿ ತಹಶೀಲದಾರರ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬುಧವಾರದಂದು ಮುಂಜಾನೆ ನಗರದ ಶ್ರೀ ಬಸವೇಶ್ವರ ವೃತದಲ್ಲಿ ಸೇರಿದ ಸಾವಿರಾರು ಮುಸ್ಲಿಂ ಸಮಾಜದ ಯುವಕರು ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರಲ್ಲದೆ ಬಾಂಬ ಧಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಎರಡು ನಿಮಿಷ ಮೌನ ಆಚರಿಸಿ ಶೃದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಬಸೀರುಲ್ ಹಕ್ ಅವರು ಜಗತ್ತಿನ ಯಾವ ಧರ್ಮವೂ ಹಿಂಸೆಯನ್ನು ಬೋಧಿಸುವದಿಲ್ಲ ಎಂದು ಹೇಳಿದರಲ್ಲದೆ ತ್ಯಾಗ-ಬಲಿದಾನದಿಂದ ಗಳಿಸಿದ ದೇಶದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಹಿಂದು, ಮುಸ್ಲಿಮ, ಸೀಖ, ಕ್ರಿಶ್ಚಿಯನ್‍ರು ಒಂದಾಗಿ ಭಯೋತ್ಪಾದಕರು ಹಾಗೂ ಬೆಂಬಲಿಸುವ ಶಕ್ತಿಗಳ ವಿರುದ್ಧ ಹೋರಾಟ ನಡೆಸುವದರ ಜೊತೆಗೆ ಸ್ವರ್ಗದಂತಿದ್ದ ಕಾಶ್ಮೀರವನ್ನು ನರಕವನ್ನಾಗಿ ಮಾಡಿರುವ ಉಗ್ರಗಾಮಿಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಾಗಿದೆ. ಕೇಂದ್ರ ಈ ಸಂಬಂಧವಾಗಿ ಕಠಿಣ ನಿಲುವು ಹೊಂದಿ ಉಗ್ರಗಾಮಿಗಳನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿದರು. ಹುತಾತ್ಮ ಸೈಸಿಕರ ಕುಟುಂಬಿಕರ ದುಃಖದಲ್ಲಿ ಇಡೀ ದೇಶದ ಜನತೆ ಹಾಗೂ ನಾವೆಲ್ಲರೂ ಸಹಭಾಗಿಯಾಗಿದ್ದು ಕೇಂದ್ರ ಸರಕಾರ ಅವರ ಕುಟುಂಬಿಕರಿಗೆ ಸಂಪೂರ್ಣ ಸಹಾಯ ಒದಗಿಸಬೇಕೆಂದು ಹೇಳಿದರು.
ಹಿರಿಯ ನಗರಸಭೆ ಸದಸ್ಯ ಎಸ್.ಎ.ಕೊತವಾಲ, ತಂಜೀಮ ಶಿಕ್ಷಣ ಸಂಸ್ಥೆಯ ಚೇರಮನ್ ಮೋಹಸೀನ ಖೋಜಾ ಮಾತನಾಡಿ ಭಯೋತ್ಪಾದಕರ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು.
ತದನಂತರ ಅಲ್ಲಿಂದ ಮೆರವಣಿಗೆ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲದಾರರ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಶೀಲದಾರ ಜಿ.ಎಸ್.ಮಳಗಿ ಅವರು ಮನವಿಯನ್ನು ಮೇಲಧಿಕಾರಿಗಳ ಮುಖಾಂತರ ಪ್ರಧಾನಿಗಳಿಗೆ ಕಳಿಸುವ ಭರವಸೆ ನೀಡಿದರು.

ಗೋಕಾಕದ ಶ್ರೀ ಬಸವೇಶ್ವರ ವೃತ್ತದಲ್ಲಿ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿದ ಬಾಂಬ ಧಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ತಾಲೂಕಿನ ಮುಸ್ಲಿಂ ಸಮಾಜದವರು ಶೃದ್ಧಾಂಜಲಿ ಸಲ್ಲಿಸಿ ನಂತರ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವದು.
ಪ್ರತಿಭಟನೆಯಲ್ಲಿ ಹಾಫೀಜ ಯುನೂಸ ನದಾಫ, ಮಾಲಾನಾ ಅಬ್ದುಲ್, ಹಾಫೀಜ ಜಮಶೇದ, ಅಂಜುಮನ್-ಎ-ಇಸ್ಲಾಮ ಕಮೀಟಿ ಅಧ್ಯಕ್ಷ ಜಾವೇದ ಗೋಕಾಕ ನಗರಸಭೆ ಸದಸ್ಯರಾದ ಎ.ಎ.ದೇಸಾಯಿ (ಅಬ್ಬಾಸ), ಹಾಜಿ ಕುತುಬುದ್ದೀನ ಗೋಕಾಕ, ಡಾ. ಅಬ್ದುಲ್‍ವಹಾಬ ಜಮಾದಾರ, ದಾದಾಪೀರ ಶಾಬಾಶಖಾನ, ಇಲಾಹಿ ಖೈರದಿ, ಮುಸ್ತಾಕ ಖಂಡಾಯತ, ಹಾಜಿ ಅಬ್ದುಲ್‍ಗಫಾರ ಕಾಗಜಿ, ಶಫೀ ಶೇಖ, ಸಲೀಮ ಖೋಜಾ, ಫಾರೂಖ ಚೌಗಲಾ, ದಸ್ತಗೀರ ಪೈಲವಾನ, ಎಮ್.ಅರ್.ಖಾನ, ಡಾ. ಜಗದಾಳೆ, ಪರವೇಜ ನಾಯಕ, ಜುಬೇರ ತ್ರಾಸಗರ, ಅಬ್ದುಲ್‍ಹಯ್ಯೂಮ ತೇರದಾಳ, ಇರ್ಷಾದ ಪಟೇಲ, ದಾದಾಪೀರ ಇಮಾರತವಾಲೆ, ಮಲೀಕ ಪೈಲವಾನ, ಸಮೀ ತೇರದಾಳ, ಜನಾಬ ಬುಡ್ಡೇಬಾಯಿ, ಶರೀಫ ಮುಧೋಳ, ಸಾಧಿಕ ಹಲ್ಯಾಳ, ಮುಗುಟ ಪೈಲವಾನ, ಹಾಜಿ ಶೌಕತ ಮಕಾನದಾರ, ಹಾಜಿ ಸಲೀಮ ಅಮ್ಮಣಗಿ, ದಸ್ತಗೀರ ಶಾಬಾಶಖಾನ, ಹಾಜಿ ಅಬ್ದುಲ್‍ಗಣಿ ಮುನ್ನೋಳ್ಳಿ ಸೇರಿದಂತೆ ಅನೇಕರು ಇದ್ದರು.
ಶ್ರೀ ಬಸವೇಶ್ವರ ವೃತ್ತದಲ್ಲಿ ಅಗಲಿದ ಹುತಾತ್ಮ ಯೋಧರಿಗೆ 2 ನಿಮಿಷ ಮೌನ ಆಚರಿಸಿ ಶೃದ್ಧಾಂಜಲಿ ಸಲ್ಲಿಸಿದರಲ್ಲದೆ ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.