RNI NO. KARKAN/2006/27779|Friday, March 20, 2026
You are here: Home » breaking news » ಚಿಕ್ಕೋಡಿ:ಮಹಾ ರಾಜ್ಯದಲ್ಲಿ ಭಾರಿ ಮಳೆ: ಜಿಲ್ಲೆಯ ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ

ಚಿಕ್ಕೋಡಿ:ಮಹಾ ರಾಜ್ಯದಲ್ಲಿ ಭಾರಿ ಮಳೆ: ಜಿಲ್ಲೆಯ ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ 

ಮಹಾ ರಾಜ್ಯದಲ್ಲಿ ಭಾರಿ ಮಳೆ: ಜಿಲ್ಲೆಯ ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ
ಚಿಕ್ಕೋಡಿ ಜು 2: ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಚಿಕ್ಕೋಡಿ ಪ್ರದೇಶದ ಹಲವು ನದಿಗಳು ತುಂಬಿ ಹರಿಯುತ್ತಿವೆ ಸುಮಾರು 8 ಸೇತುವೆಗಳು ಮುಳುಗಡೆ ಭೀತಿಯನ್ನು ಎದುರಿಸುತ್ತಿವೆ .

ಶನಿವಾರ ರಾತ್ರಿಯಿಂದ 5 ಅಡಿಗಳಷ್ಟು ನೀರು ಹೆಚ್ಚಳವಾಗಿದೆ. ಮಳೆ ಪ್ರಮಾಣ ಇದೇ ರೀತಿ ಮುಂದುವರೆದಲ್ಲಿ ಇಂದು ಸಂಜೆಯೊಳಗೆ ಕೆಲವೊಂದು ಸೇತುವೆಗಳು ಮುಳುಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಹೌದು, ಕಳೆದ ಹಲವು ದಿನಗಳಿಂದ ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಬ್ಯಾರೇಜ್‌‌ಗಳಿಂದ ಭಾರಿ ಪ್ರಮಾಣದ ನೀರು ಕೃಷ್ಣಾನದಿಗೆ ಹರಿದು ಬರುತ್ತಿದೆ. ಅದಲ್ಲದೆ ಚಿಕ್ಕೋಡಿ ತಾಲೂಕಿನ ಕಲ್ಲೂಳ-ಯಡೂರ, ಮಲಿಕವಾಡ-ದತ್ತವಾಡ, ಕಾರದಗಾ ಭೋಜ, ಭಿವಶಿ-ಜತ್ರಾಟ, ಸದಲಗಾ ಬೋರಗಾಂವ ಸೇರಿದಂತೆ ವಿವಿಧ ಕೆಳಮಟ್ಟದ ಬ್ರಿಡ್ಜ್‌‌ಗಳು ಮುಳುಗಡೆಯ ಸ್ಥಿತಿಯಲ್ಲಿದ್ದು, ಇದರಿಂದ ಜನರ ಪ್ರಯಾಣಕ್ಕೆ ಅನಾನುಕೂಲವಾಗಿದೆ.

ಸದ್ಯ ನದಿ ತೀರದಲ್ಲಿ ನೋಡಲ್ ಅಧಿಕಾರಿಗಳನ್ನು ತಾಲೂಕಾಡಳಿತ ನೇಮಕ ಮಾಡಿದರೂ ಕೂಡಾ ಯಾವ ಒಬ್ಬ ನೋಡಲ್ ಅಧಿಕಾರಿಗಳು ನದಿ ತೀರದಲ್ಲಿ ಕಾಣುತ್ತಿಲ್ಲ ಇದರಿಂದ ನದಿ ತೀರದ ಜನರು ತಾಲೂಕಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

Related posts: