RNI NO. KARKAN/2006/27779|Sunday, February 15, 2026
You are here: Home » breaking news » ಗೋಕಾಕ:ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ : ಪ್ರೀಯಾಂಕಾ ಜಾರಕಿಹೊಳಿ

ಗೋಕಾಕ:ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ : ಪ್ರೀಯಾಂಕಾ ಜಾರಕಿಹೊಳಿ 

ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ : ಪ್ರೀಯಾಂಕಾ ಜಾರಕಿಹೊಳಿ

ಗೋಕಾಕ ಜ 20 : ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದು ಪ್ರೀಯಾಂಕಾ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ರವಿವಾರದಂದು ಸತೀಶ ಜಾರಕಿಹೊಳಿ ಪೌಂಡೇಶನ್ ಪ್ರಾಯೋಜಕತ್ವದಲ್ಲಿ 18 ನೇ ಸತೀಶ ಶುಗರ್ಸ್ ಅವಾಡ್ರ್ಸ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಗಳ ಬಹುಮಾನ ಕಾರ್ಯಕ್ರಮ ವಿತರಣಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ನಮ್ಮ ತಂದೆತಾಯಿಯವರು ನಮಗೆ ಸಂಸ್ಕಾರವನ್ನು ಕಲಿಸಿ ಕೊಟ್ಟಿದ್ದಾರೆ. ಅಲ್ಲದೇ ನಮ್ಮ ತಂದೆಯವರು ಸಮಾಜ ಸೇವೆ ಮಾಡುವ ಗೋಸ್ಕರ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ಕೂಡಾ ಮುಂದುವರೆಯುತ್ತೇವೆ. ನಾವು ಚಿಕ್ಕವರಿದ್ದಾಗ ಈ ಸಾಂಸ್ಕøತಿಕ ಕಾರ್ಯಕ್ರಮ ಪ್ರಾರಂಭಗೊಂಡಿದ್ದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದೆ ಎಂದು ನಾನು ಭಾವಿಸಿರಲಿಲ್ಲ ಎಂದರಲ್ಲದೇ ಮುಂಬರುವ ದಿನಗಳಲ್ಲಿ ಇನ್ನಷ್ಟು ಪ್ರತಿಭೆಗಳಿಗೆ ಈ ವೇದಿಕೆ ಉಪಯೋಗವಾಗಲಿ. ಜನರ ನಿರೀಕ್ಷೆಯಂತೆ ಇನ್ನೂ ಉನ್ನತ ಮಟ್ಟಕ್ಕೆ ಈ ಕಾರ್ಯಕ್ರಮ ಬೆಳೆಯಲಿ ಎಂದು ಶುಭ ಹಾರೈಸಿದರು. ಈ ಕಾರ್ಯಕ್ರಮ ಆಯೋಜನೆ ಮಾಡಿದ ಸಂಘಟಕರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ವೇದಿಕೆ ಮೇಲೆ ರಾಹುಲ ಸತೀಶ ಜಾರಕಿಹೊಳಿ, ರಾಯಚೂರಿನ ನಿವೃತ್ತ ಕೃಷಿ ಅಧಿಕಾರಿ ವೈ.ಬಿ.ಪಾಟೀಲ, ಸಿಪಿಐ ದೊಡಮನಿ, ಎಸ್.ಎ.ರಾಮಗಾನಟ್ಟಿ ಇದ್ದರು.

Related posts: