RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಸಚಿವ ಪುಟ್ಟರಂಗಶೆಟ್ಟಿ ವಿರುದ್ದದ ಅಪಪ್ರಚಾರ, ಷಡ್ಯಂತ್ರ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಹೋರಾಟ

ಗೋಕಾಕ:ಸಚಿವ ಪುಟ್ಟರಂಗಶೆಟ್ಟಿ ವಿರುದ್ದದ ಅಪಪ್ರಚಾರ, ಷಡ್ಯಂತ್ರ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಹೋರಾಟ 

ಸಚಿವ ಪುಟ್ಟರಂಗಶೆಟ್ಟಿ ವಿರುದ್ದದ ಅಪಪ್ರಚಾರ, ಷಡ್ಯಂತ್ರ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಹೋರಾಟ

ಗೋಕಾಕ ಜ 13 : ಹಿಂದುಳಿದ ವರ್ಗಗಳ ನಾಯಕ, ಉಪ್ಪಾರ ಸಮಾಜದ ಹಿರಿಯರು, ಸಚಿವ ಪುಟ್ಟರಂಗಶೆಟ್ಟಿ ವಿರುದ್ದದ ಅಪಪ್ರಚಾರ, ಷಡ್ಯಂತ್ರ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ಎಂದು ಉಪ್ಪಾರ ಸಮಾಜದ ಗೋಕಾಕ ತಾಲೂಕು ಮುಖಂಡರು ಎಚ್ಚರಿಸಿದ್ದಾರೆ.
ರವಿವಾರಂದು ನಗರ ಹೊರವಲಯದ ಪ್ರವಾಸ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ನಂತರ ಮಾತನಾಡಿ ತಾಲೂಕಾ ಉಪ್ಪಾರ ಸಮಾಜದ ಅಧ್ಯಕ್ಷ ಆರ್ ವೈ ತೋಳಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳಲ್ಲೇ ಅತ್ಯಂತ ಹಿಂದುಳಿದ ಸಮಾಜವೆಂದರೆ ಅದು ಉಪ್ಪಾರ ಸಮಾಜ. ಶೈಕ್ಷಣಿಕ,ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿದೆ. ಉಪ್ಪಾರ ಸಮಾಜದ ರಾಜ್ಯಾಧ್ಯಕ್ಷ, ಸಚಿವ ಪುಟ್ಟರಂಗಶೆಟ್ಟಿ ಚಾಮರಾಜ ನಗರ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿ, ಇತಿಹಾಸದಲ್ಲೇ ಮೊದಲ ಬಾರಿಗೆ ಸಮಾಜದಿಂದ ಸಚಿವರಾಗಿ ಸಾಧನೆ ಮಾಡಿದ್ದಾರೆ. ಇಂತಹವರ ವಿರುದ್ದ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಇನ್ನು ಕೆಲವರು ಪುಟ್ಟರಂಗಶೆಟ್ಟಿ ತೇಜೋವಧೆಗೆ ಮುಂದಾಗಿದ್ದು ಸರಿಯಲ್ಲ. ಇಂತಹ ಕುಕೃತ್ಯವನ್ನು ಸಮಾಜ ತೀವ್ರವಾಗಿ ಖಂಡಿಸುತ್ತದೆ.
ಉಪ್ಪಾರ ಸಮಾಜದ ಏಳಿಗೆ, ಅಭಿವೃದ್ದಿ ಸಹಿಸಲಾಗದ ಪಟ್ಟಭದ್ರರು ಮೋಹನ್ ಎಂಬಾತನನ್ನು ಬಳಸಿಕೊಂಡು ಷಡ್ಯಂತ್ರ ನಡೆಸುತ್ತಿವೆ. ಸಚಿವ ಪುಟ್ಟರಂಗಶೆಟ್ಟಿ ಇಲ್ಲದ ವೇಳೆ ಯಾವುದೇ ಸಂಬಂಧವೇ ಇಲ್ಲದೇ 25.76 ಲಕ್ಷ ರೂ ಗಳು ಸಚಿವರಿಗೆ ಸೇರಿದ್ದು ಅಂತ ಅಪಪ್ರಚಾರ ಮಾಡಲಾಗುತ್ತಿದೆ.. ಸಚಿವರು ತಪ್ಪು ಮಾಡಿದ್ದರೆ ಇಲಾಖೆ ತನಿಖೆ ನಡೆಸಲಿ. ವಿನಾಕಾರಣ ಸಚಿವ ಪುಟ್ಟರಂಗಶೆಟ್ಟಿ ಸಚಿವ ಸ್ಥಾನಕ್ಕೆ ಚ್ಯುತಿ ತರಲು ಪ್ರಯತ್ನಿಸುವುದು ಸರಿಯಲ್ಲ. ಪೋಲೀಸ್ ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ. ಸಚಿವರ ತೇಜೋವಧೆ ಮಾಡುವುದು. ಸಚಿವ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ಮಾಡಿದರೆ ಸಮಾಜದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡÀಬೇಕಾದೀತು ಎಂದು ಈ ಮೂಲಕ ಕೋರಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪ್ಪಾರ ಯುವ ಘಟಕ ಅಧ್ಯಕ್ಷ ಬಿ ಎಲ್ ಉಪ್ಪಾರ, ಅರಭಾಂವಿ ಕಾಂಗ್ರೆಸ್ ಆಧ್ಯಕ್ಷ ಜಿ ಆರ್ ಪೂಜೇರ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಚನ್ನಪ್ಪ ವಗ್ಗನ್ನವರ, ನ್ಯಾಯವಾದಿ ಸಂಘದ ಉಪಾಧ್ಯಕ್ಷ ಎಸ್ ಎಸ್ ಪಾಟೀಲ, ಭೀಮಶಿ ಭರಮನ್ನವರ, ರಾಜ್ಯ ಉಪ್ಪಾರ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಚೌಕಾಶಿ, ಎಪಿಎಮ್‍ಸಿ ಆಧ್ಯಕ್ಷ ಅಡಿವೆಪ್ಪ ಕಿತ್ತೂರು, ತಾಲೂಕು ಯುವ ಘಟಕದ ಆಧ್ಯಕ್ಷ ಶಂಭುಲಿಂಗ ಮುಕಣ್ಣವರ, ಮಾಯಪ್ಪ ತಹಶೀಲ್ದಾರ, ವಿಠ್ಠಲ ಹೆಜ್ಜೆಗಾರ, ಶೇಖರ ಜೋಗ್ಯಾಗೋಳ, ವೈ ಎಲ್ ಹೆಜ್ಜೆಗಾರ, ಗಣಪತಿ ತಹಶೀಲ್ದಾರ, ಯಲ್ಲಪ್ಪ ಗೋಸಬಾಳ ಸೇರಿದಂತೆ ಅನೇಕರು ಇದ್ದರು.

Related posts: