RNI NO. KARKAN/2006/27779|Sunday, August 3, 2025
You are here: Home » breaking news » ರಾಯಬಾಗ:ಕುಡಿದ ಅಮಲಿನಲ್ಲಿ ಮಕ್ಕಳಿಗೆ ಪೂಲ್ ಕ್ಲಾಸ್ : ರಾಯಬಾಗನ ಚಿಂಚಲಿ ಪಟ್ಟಣದಲಿ ಶಿಕ್ಷಕನ ಆವಾಂತರ

ರಾಯಬಾಗ:ಕುಡಿದ ಅಮಲಿನಲ್ಲಿ ಮಕ್ಕಳಿಗೆ ಪೂಲ್ ಕ್ಲಾಸ್ : ರಾಯಬಾಗನ ಚಿಂಚಲಿ ಪಟ್ಟಣದಲಿ ಶಿಕ್ಷಕನ ಆವಾಂತರ 

ಕುಡಿದ ಅಮಲಿನಲ್ಲಿ ಮಕ್ಕಳಿಗೆ ಪೂಲ್ ಕ್ಲಾಸ್ : ರಾಯಬಾಗನ ಚಿಂಚಲಿ ಪಟ್ಟಣದಲಿ ಶಿಕ್ಷಕನ ಆವಾಂತರ

 

ರಾಯಬಾಗ ಜೂ 29: ಶಿಕ್ಷಕರೆಂದರೆ ಮಕ್ಕಳಿಗೆ ತಿದ್ದಿ ತಿಡಿ ಬುದ್ಧಿ ಹೇಳಿ ಪ್ರಜ್ಞಾವಂತರನ್ನಾಗಿ ಮಾಡಿ ಶುಶಿಕ್ಷಿತ ಸಮಾಜ ನಿರ್ಮಾಸುವುದು ಆದರೆ ಇಲ್ಲೋಬ್ಬ ಶಿಕ್ಷಕ ತನ್ನ ವೃತ್ತಿಯನ್ನು ಕುಡಿತದ ಚಟಕ್ಕೆ ಒತ್ತೆಯಿಟ್ಟು ಶಿಕ್ಷಕ ವೃತ್ತಿಯನ್ನು ಅವಮಾನಿಸಿದ್ದಾನೆ

ಎಚ್‌. ಎಸ್‌. ಹಾರೋಗೇರಿ (42) ಎಂಬುವವರೇ ಕುಡಿದು ಬಂದು ಪಾಠ ಮಾಡಿದ ಶಿಕ್ಷಕರಾಗಿದ್ದು, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇವರು ಗಣಿತ ಮತ್ತು ವಿಜ್ಞಾನ ವಿಷಯವನ್ನು ಬೋಧಿಸುತ್ತಿದ್ದರು. 

ಇಂದು ಇವರು ಕುಡಿದು ಬಂದು ಪಾಠ ಮಾಡುತ್ತಿದ್ದರು ಎನ್ನಲಾಗಿದ್ದು, ವಿಷಯ ತಿಳಿದು, ಗ್ರಾಮಸ್ಥರು ಈ ಶಿಕ್ಷಕನನ್ನು ಸರಕಾರಿ ಆಸ್ಪತ್ರೆಗೆ ಚೆಕ್ ಮಾಡಲು ಕರೆದುಕೊಂಡು ಹೋಗಿದ್ದಾರೆ. ಇವರು ದಿನನಿತ್ಯ ಕುಡಿದು ಬರುತ್ತಿದ್ದರು ಎಂದು ಕೆಲವರು ಆರೋಪಿಸಿದ್ದಾರೆ.  ಬಿಇಓ ರಾಜೇಂದ್ರ ತೆರದಾಳ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Related posts: