ಗೋಕಾಕ:ನೆರೆಹೊರೆ ಯುವ ಸಂಸತ್ತು ಹಾಗೂ ಅಂತರಾಷ್ಟ್ರೀಯ ಯೋಗ ದಿನ ಆಚರಣೆ
ನೆರೆಹೊರೆ ಯುವ ಸಂಸತ್ತು ಹಾಗೂ ಅಂತರಾಷ್ಟ್ರೀಯ ಯೋಗ ದಿನ ಆಚರಣೆ
ಬೆಟಗೇರಿ ಡಿ 13 : ಬೆಳಗಾವಿ ನೆಹರು ಯುವ ಕೇಂದ್ರ ಹಾಗೂ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಸಮೀಪದ ಕೌಜಲಗಿ ಪಟ್ಟಣದ ನೆಹರು ಯುವಕ ಸಂಘ, ನಾಗನೂರ ಶುಭ ಸಂದೇಶ ಸೇವಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಡಿ.11ರಂದು ಕೌಜಲಗಿ ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನೆರೆಹೊರೆ ಯುವ ಸಂಸತ್ತು ಹಾಗೂ ಅಂತರಾಷ್ಟ್ರೀಯ ಯೋಗ ದಿನ ಆಚರಣೆ ಕಾರ್ಯಕ್ರಮ ನಡೆಯಿತು.
ಯೋಗಗುರು ಅರವಿಂದ ದೇಸಾಯಿ ಅವರು, ವಜ್ರಾಸನ, ಚಕ್ರಾಸನ, ಪದ್ಮಾಸನ, ಭುಜಂಗಾಸನ ಸೇರಿದಂತೆ ಹಲವು ಯೋಗ ಭಂಗಿಗಳನ್ನು ತಿಳಿಸಿದರು. ವಿ.ಎಸ್.ಅರಬಳ್ಳಿ, ಪಿಡಿಒ ಎಚ್.ಡಿ.ಲಿಂಬೋಜಿ, ಪ್ರಾಚಾರ್ಯ ಎಮ್.ಕೆ.ಹಾದಿಮನಿ, ಬೆಳಗಾವಿ ನೆಹರು ಯುವಕೇಂದ್ರದ ಯೋಜನಾಧಿಕಾರಿ ವಿಕಾಸ.ಎಮ್., ಮಾತನಾಡಿದರು. ಮಂಜುನಾಥ ಸಣ್ಣಕ್ಕಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಂಜೀವ ಮೇತ್ರಿ, ನೀಲಪ್ಪ ಕೇವಟಿ, ಬಿ.ಐ.ದೇವಡೆ, ವಿಠಲ ಕೆಳಮನಿ, ದುರ್ಗವ್ವ ಮೇತ್ರಿ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ವಿವಿಧ ಯುವ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಪಂ ಸದಸ್ಯರು, ಸ್ಥಳೀಯ ಕನಕ ಶಿಕ್ಷಣ ಸಂಸ್ಥೆ, ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಗಣ್ಯರು, ಮತ್ತೀತರರು ಇದ್ದರು.
ಕುಮಾರ ಕರವಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿಂಗಪ್ಪ ಇಟ್ನಾಳ ವಂದಿಸಿದರು.