ಗೋಕಾಕ:ಅರಭಾವಿ ಭಾಗದ ಜನರು ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ಚಿರಋಣಿ : ಶಾಸಕ ಬಾಲಚಂದ್ರ
ಅರಭಾವಿ ಭಾಗದ ಜನರು ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ಚಿರಋಣಿ : ಶಾಸಕ ಬಾಲಚಂದ್ರ
ಗೋಕಾಕ ಅ 21 : ನಿಮ್ಮ ಮನೆಯ ಮಗನಂತೆ ಹರಿಸಿ-ಹಾರೈಸಿದ್ದರಿಂದ ಸತತ 5ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿ ಮತ್ತೊಮ್ಮೆ ನಿಮ್ಮೆಲ್ಲರ ಸೇವೆಗೆ ಅವಕಾಶ ಬಂದೊದಗಿದೆ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಗೆ ಸಮೀಪದ ಮೆಳವಂಕಿ ಗ್ರಾಮದಲ್ಲಿ ಶನಿವಾರ ಸಂಜೆ ವಿವಿಧ ಕಾಮಗಾರಿಗಳನ್ನು ನೆರವೇರಿಸಿ ಮಾತನಾಡಿದ ಅವರು, ಅರಭಾವಿ ಭಾಗದ ಜನರು ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ಎಂದಿಗೂ ಚಿರಋಣಿಯಾಗಿರುವೆ ಎಂದು ಹೇಳಿದರು.
ಸಹೋದರತ್ವ ಭಾವನೆಯನ್ನು ಇಟ್ಟುಕೊಂಡು ಎಲ್ಲ ಸಮಾಜದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ವಿಕಾಸಕ್ಕೆ ಶ್ರಮಿಸಿದ್ದೇನೆ. ಗ್ರಾಮಸ್ಥರು ಒಗ್ಗಟ್ಟಿನಿಂದ ದುಡಿದಿದ್ದರಿಂದ ಕಳೆದ ಚುನಾವಣೆಯಲ್ಲಿ ಭಾರಿ ಮುನ್ನಡೆಯನ್ನು ಪಡೆದುಕೊಂಡು ಜಯಶಾಲಿಯಾಗಿರುವುದಾಗಿ ಹೇಳಿದರು.
ಮೆಳವಂಕಿ ಗ್ರಾಮದ ವಿಕಾಸಕ್ಕೆ ಕಳೆದ 15 ವರ್ಷಗಳಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಕುಡಿಯುವ ನೀರು, ರಸ್ತೆ, ಸೇರಿದಂತೆ ಮೂಲ ಸೌಕರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಈ ಮೊದಲಿದ್ದ ಮೆಳವಂಕಿ ಗ್ರಾಮ ಈಗ ಭಾರಿ ಪರಿವರ್ತನೆಯಾಗಿದ್ದು, ಸಾಧು-ಸಂತರು ಹಾಕಿಕೊಟ್ಟ ಮಾರ್ಗದಲ್ಲಿ ಗ್ರಾಮಸ್ಥರು ಮುನ್ನಡೆಯುತ್ತಿರುವುದು ಸಂತೋಷಕರ ಸಂಗತಿ ಎಂದು ಹೇಳಿದರು.
ಗ್ರಾಮಸ್ಥರ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸುವ ಭರವಸೆ ನೀಡಿದ ಅವರು, ಮುಂದಿನ ವರ್ಷದಿಂದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯವನ್ನು ಮಂಜೂರು ಮಾಡಿಸುವ ವಾಗ್ದಾನ ನೀಡಿದರು.
ಗುದ್ದಲಿ ಪೂಜೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ 36 ಲಕ್ಷ ರೂ. ವೆಚ್ಚದ ಪ್ರಾಥಮಿಕ ಪಶು ಚಿಕಿತ್ಸಾಲಯ ಕಟ್ಟಡ, 11 ಲಕ್ಷ ರೂ. ವೆಚ್ಚದ ಎನ್‍ಆರ್‍ಡಿಡಬ್ಲೂಪಿ ಯೋಜನೆಯಡಿ ಸದಾಶಿವ ನಗರದಲ್ಲಿ ಮೇಲ್ಮಟ್ಟದ ಜಲಸಂಗ್ರಹಾಲಯ ಹಾಗೂ ಸಿದ್ಧಾರೂಢ ಮಠದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಂಕಲಗಿ ಅಡವಿಸಿದ್ಧೇಶ್ವರ ಮಠದ ಗುರುಸಿದ್ಧೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಸ್ಥಳೀಯ ಗೋಪಾಲ ಸ್ವಾಮಿ ಸಾನಿಧ್ಯ ವಹಿಸಿದ್ದರು.
ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ರಾಮಚಂದ್ರ ಪತ್ತಾರ, ಸತ್ತೆಪ್ಪ ಬಬಲಿ, ಮಹಾದೇವ ಪತ್ತಾರ, ಸಿದ್ದಪ್ಪ ಹಂಜಿ, ರಾಮಣ್ಣಾ ಕಾಪಸಿ, ಈರಪ್ಪ ಬೀರನಗಡ್ಡಿ, ಅಲ್ಲಪ್ಪ ಕಂಕಣವಾಡಿ, ದೊಡ್ಡಪ್ಪ ಕರೆಪ್ಪನವರ, ಮುತ್ತೆಪ್ಪ ಹಡಗಿನಾಳ, ಬಾಳಪ್ಪ ಡೊಂಬರ, ಬಸವರಾಜ ಹತ್ತರವಾಟ, ಅಡಿವೆಪ್ಪ ಮುತವಾಡ, ಭೀಮಪ್ಪ ಭೂಮನ್ನವರ, ಅಪ್ಪಯ್ಯ ಅಗ್ನೆಪ್ಪಗೋಳ, ನಾಗಪ್ಪ ಮಂಗಿ, ಮಹಾಲಿಂಗ ಚಿಪ್ಪಲಕಟ್ಟಿ, ಭೂಸೇನಾ ನಿಗಮದ ಎಇಇ ಆರ್.ಪಿ. ನಾರಾಯಣಕರ, ಪಶು ವೈದ್ಯಕೀಯ ಎ.ಡಿ ಡಾ.ಮೋಹನ ಕಮತ, ಸುಮನ್ ಜಾಧವ, ಯಲ್ಲಪ್ಪ ದಾಸಪ್ಪನವರ, ಮುಂತಾದವರು ಉಪಸ್ಥಿತರಿದ್ದರು.