RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಪಾಮಲದಿನ್ನಿ ಹಳ್ಳದಿಂದ ಏತ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲಾಗುವದು : ಶಾಸಕ ಬಾಲಚಂದ್ರ

ಗೋಕಾಕ:ಪಾಮಲದಿನ್ನಿ ಹಳ್ಳದಿಂದ ಏತ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲಾಗುವದು : ಶಾಸಕ ಬಾಲಚಂದ್ರ 

ಪಾಮಲದಿನ್ನಿ ಹಳ್ಳದಿಂದ ಏತ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲಾಗುವದು : ಶಾಸಕ ಬಾಲಚಂದ್ರ

ಗೋಕಾಕ ಅ 9 : ದಂಡಾಪೂರದಿಂದ ದಂಡಾಪೂರ ಕ್ರಾಸ್‍ವರೆಗಿನ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.
ತಾಲೂಕಿನ ದಂಡಾಪೂರ ಗ್ರಾಮಕ್ಕೆ ಭೇಟಿ ನೀಡಿ ಅರಣ್ಯಸಿದ್ಧೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರನ್ನುದ್ಧೇಶಿಸಿ ಮಾತನಾಡಿದ ಅವರು, 4 ಕಿ.ಮೀ ಅಂತರದ ರಸ್ತೆಯನ್ನು ಸುಧಾರಣೆ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.
ದಂಡಾಪೂರ ಮೇಲ್ಮಟ್ಟದ ಜಮೀನುಗಳಿಗೆ ಪಾಮಲದಿನ್ನಿ ಹಳ್ಳದಿಂದ ಏತ ನೀರಾವರಿ ಸೌಲಭ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ ಅವರು, ಈ ಏತ ನೀರಾವರಿ ಸೌಲಭ್ಯ ಅನುಷ್ಠಾನದಿಂದ ಸುಮಾರು 1000 ಎಕರೆ ಜಮೀನುಗಳಿಗೆ ನೀರು ದೊರಕಲಿದೆ. ಸಣ್ಣ ನೀರಾವರಿ ಇಲಾಖೆಗೆ ಏತ ನೀರಾವರಿ ಸಂಬಂಧ ಪ್ರಸ್ತಾವಣೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಮೇ 12 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನರು ತಮ್ಮ ಮೇಲಿಟ್ಟಿರುವ ಪ್ರೀತಿ-ವಿಶ್ವಾಸದಿಂದ ಮತ ಚಲಾಯಿಸಿ ನನ್ನನ್ನು ಸತತ 5ನೇ ಬಾರಿಗೆ ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದೀರಿ. ನಿಮ್ಮ ಪ್ರೀತಿ-ವಿಶ್ವಾಸಕ್ಕೆ ಚ್ಯುತಿ ತರದೇ ಅರಭಾವಿ ವಿಧಾನಸಭಾ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು. ಕಳೆದ 15 ವರ್ಷಗಳ ಅವಧಿಯಲ್ಲಿ ಅರಭಾವಿ ಕ್ಷೇತ್ರ ಎಲ್ಲದರಲ್ಲೂ ಗಮನಾರ್ಹ ಸಾಧನೆ ಮಾಡಿರುವುದು ತೃಪ್ತಿ ತಂದಿದೆ. ಮುಂದೆಯೂ ಕ್ಷೇತ್ರದ ಪ್ರಗತಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವುದಾಗಿ ತಿಳಿಸಿದರು.
ಪ್ರಭಾಶುಗರ ನಿರ್ದೇಶಕ ಲಕ್ಷ್ಮಣ ಗಣಪ್ಪಗೋಳ, ರಾಜಾಪೂರ ಪಿಕೆಪಿಎಸ್ ಅಧ್ಯಕ್ಷ ಬಸವಂತ ಕಮತಿ, ಘಯೋನಿಬ ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಸ್ಥಳೀಯರಾದ ರಾಮಕೃಷ್ಣ ಹೊರಟ್ಟಿ, ಸಿದ್ದಪ್ಪ ಢವಳೇಶ್ವರ, ರಾಮಪ್ಪ ಸತ್ತೆಪ್ಪಗೋಳ, ಅಮ್ಮಣ್ಣಾ ರಾಜಾಪುರೆ, ಲಕ್ಷ್ಮಣ ಶೀಮಕ್ಕನವರ, ರಾಯಪ್ಪ ರಾಜಾಪುರೆ, ರುದ್ರಪ್ಪ ಪೊಲೀಸ್‍ಗೋಳ, ಸಿದ್ದಪ್ಪ ತುಕ್ಕಾನಟ್ಟಿ, ಮಲ್ಲಿಕಾರ್ಜುನ ಪೊಲೀಸ್‍ಗೋಳ, ನಾಗಪ್ಪ ಹೊರಟ್ಟಿ, ಗ್ರಾಪಂ ಸದಸ್ಯರು, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಹೃದಯಸ್ಪರ್ಶಿಯಾಗಿ ಸತ್ಕರಿಸಿದರು.

Related posts:

ಗೋಕಾಕ:ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಾಡಿದರೆ ತಾಲೂಕಿನ ಅಭಿವೃದ್ಧಿ ಸಾಧ್ಯ : ಡಾ. ಕೆ.ವ್ಹಿ….

ಗೋಕಾಕ:ಕುದುರೆ ಕೊಟ್ಟರೆ ಸಾಲದು ಒಬ್ಬ ಸಾರಥಿ ಬೇಕು : ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಸಚಿವೆ ಜೊಲ್ಲೆ ತೀರುಗೇಟ…

ಗೋಕಾಕ:ಡಿ.3ರಿಂದ ಡಿ.4ರವರೆಗೆ ಗೋಸಬಾಳ ಮಾರುತಿ ದೇವಸ್ಥಾನದ ಶತಮಾನೋತ್ಸವ, ಕಾರ್ತಿಕೋತ್ಸವ ಹಾಗೂ ಯಾತ್ರಿನಿವಾಸ ಉದ್ಘಾಟನೆ…