ಮೂಡಲಗಿ:ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ
ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ
ಮೂಡಲಗಿ ಸೆ 14 : ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರು ಹಿಡಕಲ್ ಡ್ಯಾಂ ದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಗವಹಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆಂದು ಪ್ರಧಾನ ಗುರು ವಾಯ್.ಪಿ ರೈನಾಪೂರ ತಿಳಿಸಿದ್ದಾರೆ.
ಮಕ್ಕಳ ಈ ಸಾಧನೆಗೆ ದೈಹಿಕ ಶಿಕ್ಷಕ ಬಿ.ಎಲ್ ನಾಯಿಕ, ಶಿಕ್ಷಕರಾದ ಶೋಭಾ ದೊಡಮನಿ, ಪ್ರೇಮಾ ಹಳೇಪೇಠ, ಸೀಮ್ ಹೊಟ್ಕರ, ರಾಕೇಶ ಆರ್, ಸದಾಶಿವ ಹರಿಜನ ಶ್ರಮಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಎಸ್.ಡಿ.ಎಮ್.ಸಿ ಪದಾಧಿಕಾರಿಗಳು ಹಾಗೂ ಸಿ.ಆರ್.ಪಿ ರಾಜು ಗುಡೆನ್ನವರ, ಪಿ.ಇಓ ಎಸ್.ಎ ನಾಡಗೌಡ, ಬಿ.ಇ.ಓ ಎ.ಸಿ ಗಂಗಾಧರ ಪ್ರಶಂಸಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.