ಬೆಳಗಾವಿ:ಜಿ.ಪಂ ಅಧ್ಯಕ್ಷೆ ವಿರುದ್ಧ ಕೇಳಿ ಬಂತು ಠೇವಣಿ ಹಣ ದುರುಉಪಯೋಗ ಆರೋಪ
ಜಿ.ಪಂ ಅಧ್ಯಕ್ಷೆ ವಿರುದ್ಧ ಕೇಳಿ ಬಂತು ಠೇವಣಿ ಹಣ ದುರುಉಪಯೋಗ ಆರೋಪ
ಬೆಳಗಾವಿ ಸೆ 6 : ಜಿ.ಪಂ ಅಧ್ಯಕ್ಷೆ ಆಶಾ ಐಹೊಳೆ ಮತ್ತು ಅವರ ಪತಿ ಪ್ರಶಾಂತ ಐಹೊಳೆ ವಿರುದ್ಧ 15 ಕೋಟಿ ರೂ ಠೇವಣಿ ವಂಚನೆ ಆರೋಪ ಕೇಳಿ ಬಂದಿದೆ
ಜಿ.ಪಂ. ಅಧ್ಯಕ್ಷೆ ಆಶಾ ಐಹೊಳೆ ನಿರ್ದೇಶಕಿ ಇರುವ ಹಾಗೂ ಅಧ್ಯಕ್ಷೆ ಪತಿ ಪ್ರಶಾಂತ ಐಹೊಳೆ ಮಾಲೀಕರಿರುವ ಅಥಣಿಯ ಮಹಾಲಕ್ಷ್ಮಿ ಮಲ್ಟಿ ಮತ್ತು ಡಿಸ್ಟ್ರಿಕ್ಟ್ ಪ್ರೈ.ಲಿಯಲ್ಲಿನ ಠೇವಣಿ ಇಟ್ಟಿದ್ದ ಹಣವನ್ನು ನೀಡದೇ ವಂಚನೆ ಮಾಡಿದ್ದಾರೆ ಎಂದು ಗ್ರಾಹಕರು ದೂರಿದ್ದಾರೆ.
ಇಂದು ಜಿ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದ ಗ್ರಾಹಕರು, ಅಧ್ಯಕ್ಷೆ ಆಶಾ ಐಹೊಳೆ ಹಾಗೂ ಪ್ರಶಾಂತ ಐಹೊಳೆ ಅವರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು. ಅವಧಿ ಮುಗಿದರೂ ಠೇವಣಿ ಹಣ ನೀಡುತ್ತಿಲ್ಲ. ಕೆಲ ದಿನಗಳ ಹಿಂದೆ ನಮ್ಮ ಒತ್ತಾಯಕ್ಕೆ ಮಣಿದು ನಕಲಿ ಚೆಕ್ ನೀಡಲಾಗಿದೆ. ಈ ಚೆಕ್ಗಳನ್ನು ಇತರ ಬ್ಯಾಂಕ್ಗಳು ಪರಿಗಣಿಸುತ್ತಿಲ್ಲ ಎಂದು ದೂರಿದರು.
ಗ್ರಾಹಕರ ಒತ್ತಾಯಕ್ಕೆ ಮಣಿದು ಪ್ರತಿಭಟನಾ ಸ್ಥಳಕ್ಕೆ ಬಂದ ಆಶಾ ಐಹೊಳೆ, ಏಳು ವರ್ಷಗಳ ಹಿಂದೆ ನಿರ್ದೇಶಕಿ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ತಿಳಿಸಿ, ಒಳ ನಡೆದರು. ಆಶಾ ಐಹೊಳೆ ಕ್ರಮವನ್ನು ಖಂಡಿಸಿ ಗ್ರಾಹಕರು ಘೋಷಣೆ ಕೂಗಿದರು.
ಬೆಳಗಾವಿ ಅಷ್ಟೇ ಅಲ್ಲದೇ ವಿಜಯಪುರ, ಕೊಲ್ಲಾಪುರ, ಸಾಂಗ್ಲಿ ಭಾಗದ ಗ್ರಾಹಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.