RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಅಕ್ಕಸಮ್ಮೇಳಕ್ಕೆ ಆಯ್ಕೆಯಾದ ಎಂ ಬಿ ಕುದರಿ ಅವರಿಗೆ ಕರವೇಯಿಂದ ಸನ್ಮಾನ

ಗೋಕಾಕ:ಅಕ್ಕಸಮ್ಮೇಳಕ್ಕೆ ಆಯ್ಕೆಯಾದ ಎಂ ಬಿ ಕುದರಿ ಅವರಿಗೆ ಕರವೇಯಿಂದ ಸನ್ಮಾನ 

ಅಕ್ಕಸಮ್ಮೇಳಕ್ಕೆ ಆಯ್ಕೆಯಾದ ಎಂ ಬಿ ಕುದರಿ ಅವರಿಗೆ ಕರವೇಯಿಂದ ಸನ್ಮಾನ

ಗೋಕಾಕ ಅ 26 : ವೃತ್ತಿಯಿಂದ ಇಂಗ್ಲಿಷ್ ಉಪನ್ಯಾಸಕರಾಗಿದ್ದ ವಿಶ್ರಾಂತ ಪ್ರಾಧ್ಯಾಪಕ ಎಂ ಬಿ ಕುದರಿ ಅವರು ಹೊರ ರಾಷ್ಟ್ರದಲ್ಲಿ ಕನ್ನಡದ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ ಇವರ ಕನ್ನಡ ಪ್ರೇಮ ಇತರರಿಗೆ ಮಾದರಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು

ಶನಿವಾರದಂದು ನಗರದಲ್ಲಿರುವ ವಿಶ್ರಾಂತ ಪ್ರೋ . ಎಂ ಬಿ ಕುದರಿ ಅವರ ನಿವಾಸದಲ್ಲಿ ಕರವೇಯಿಂದ ಹಮ್ಮಿಕೊಂಡಿದ್ದ ಸರಳ ಸತ್ಕಾರ ಸಮಾರಂಭದಲ್ಲಿ ಅಮೇರಿಕಾದಲ್ಲಿ ನಡೆಯುವ ವಿಶ್ವ ಅಕ್ಕಸಮ್ಮೇಳದ ಕವಿ ಗೋಷ್ಠಿಗೆ ಆಯ್ಕೆಯಾಗಿರುವ ವಿಶ್ರಾಂತ ಉಪನ್ಯಾಸಕ ಎಂ ಬಿ ಕುದರಿ ಅವರನ್ನು ಸತ್ಕರಿಸಿ ಮಾತನಾಡಿದರು

ಸನ್ 2004 ರ ವರೆಗೆ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿರುವ ಕುದರಿ ಅವರು ಕಳೆದ 13 ವರ್ಷಗಳಿಂದ ಕನ್ನಡವನ್ನು ಕಟ್ಟಿ ಬೆಳೆಸುವಲ್ಲಿ ಸಕ್ರೀಯರಾಗಿ ಇಲ್ಲಿಯ ವರೆಗೆ ಸುಮಾರು 9 ರಾಷ್ಟ್ರಗಳಲ್ಲಿ ನಡೆದ ಕನ್ನಡದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕನ್ನಡ ಬಗ್ಗೆ ಉಪನ್ಯಾಸ , ಕವಿ ಗೋಷ್ಠಿಗಳಲ್ಲಿ ಪಾಲ್ಗೊಂಡು ಕನ್ನಡದ ಕೀರ್ತಿಯನ್ನು ಹೆಚ್ಚಿಸಿದ್ದಾರೆ . ಆ 31 ರಂದು ಅಮೇರಿಕಾದ ಡಲ್ಲಾಸನಲ್ಲಿ ನಡೆಯುವ ಅಕ್ಕ ಸಮ್ಮೇಳದ ಕವಿಗೋಷ್ಠಿಯಲ್ಲಿ ಭಾಗವಹಿಸುತ್ತಿರುವದು ಗೋಕಾಕ ನಾಡಿನ ಹೆಮ್ಮೆ ಇವರ ಈ ಕನ್ನಡ ಸೇವೆ ಹೀಗೆಯೆ ನಿರಂತರ ನಡೆಯಲ್ಲಿ ಎಂದು ಖಾನಪ್ಪನವರ ಶುಭ ಹಾರೈಸಿದರು

ಈ ಸಂದರ್ಭದಲ್ಲಿ ಸಾಧಿಕ ಹಲ್ಯಾಳ , ಕೃಷ್ಣಾ ಖಾನಪ್ಪನವರ , ಮುಗುಟ ಪೈಲವಾನ , ಮಂಜುನಾಥ ಪ್ರಭುನಟ್ಞಿ , ಆನಂದ ಖಾನಪ್ಪನವರ , ದತ್ತು ಕೋಲಕಾರ ,ಮಹಾಂತೇಶ ಸೋಲಬನ್ನವರ , ಮಲ್ಲು ಗುಂಡಕಲ್ಲಿ , ಶಾಹೀದ ಕಮತ , ಲಾಲಸಾಬ ಮುಲ್ಲಾ , ಪ್ರಫುಲ ಹುಕ್ಕೇರಿಮಠ, ಮಂಜುನಾಥ್ ಪಿ.ಕೆ , ಸೇರಿದಂತೆ ಇತರರು ಉಪಸ್ಥಿತರಿದ್ದರು

Related posts: