RNI NO. KARKAN/2006/27779|Tuesday, May 19, 2026
You are here: Home » breaking news » ಘಟಪ್ರಭಾ:ದಿ.19ರಂದು ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ

ಘಟಪ್ರಭಾ:ದಿ.19ರಂದು ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ 

ದಿ.19ರಂದು ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ

ಘಟಪ್ರಭಾ ಅ 18 : ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ದಿವಂಗತ ಶ್ರೀ ಲಕ್ಷ್ಮಣ ಪೂಜೇರಿ ಹಾಗೂ ದಿವಂಗತ ಶ್ರೀ ಅಜ್ಜಪ್ಪ ಪೂಜೇರಿ ಅವರ ಪುಣ್ಯ ಸ್ಮರಣೆ ಅಂಗವಾಗಿ ದಿ.19ರಂದು ಸಂಜೆ 6 ಗಂಟೆಗೆ 58 ಕೆಜಿ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಕಬ್ಬಡ್ಡಿ ಪಂದ್ಯಾವಳಿಯ ಉದ್ಘಾಟನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ವಿಠ್ಠಲ ದೇವರ ಪೂಜಾರಿ ವಹಿಸುವರು.ಮುಖ್ಯ ಅತಿಥಿಗಳಾಗಿ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ, ಜಯಶೀಲ ಶೆಟ್ಟಿ, ರಾಜು ತಳವಾರ, ಭೀಮಗೌಡ ಪಾಟೀಲ, ಮಡ್ಡೆಪ್ಪ ತೋಳಿನವರ, ಸುಧೀರ ಜೋಡಟ್ಟಿ, ನಿಂಗಪ್ಪ ಬಂಬಲಾಡಿ ಸಿದ್ದಪ್ಪ ಸತ್ತಿಗೇರಿ ಆಗಮಿಸುವರು. ಪ್ರಥಮ ಬಹುಮಾನ ಹತ್ತು ಸಾವಿರ ರೂ.ನಗರದು ಮತ್ತು ಟ್ರೋಪಿ, ದ್ವಿತೀಯ ಬಹುಮಾನ ಏಳು ಸಾವಿರ ರೂ. ನಗದು ಮತ್ತು ಟ್ರೋಪಿ, ತೃತೀಯ ಬಹುಮಾನ ಐದು ಸಾವಿರ ರೂ. ನಗದು ಮತ್ತು ಟ್ರೋಪಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ರಾಜು ನಿಲಜಗಿ ಮೊ: 7353977479 ಸಂಪರ್ಕಿಸಲು ಕೋರಲಾಗಿದೆ.

Related posts: