ಗೋಕಾಕ:ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಶೋಕ
ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಶೋಕ
ಗೋಕಾಕ ಅ 16 : ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಪ್ರೋಖ್ರಾನ್ ಅಣು ಪರೀಕ್ಷೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ಪಾಕಿಸ್ತಾನದೊಂದಿಗೆ ಬಾಂಧವ್ಯ ಬೆಸೆಯುವ ಸಾರಿಗೆ ವ್ಯವಸ್ಥೆ ಮುಂತಾದ ಯೋಜನೆಗಳು ವಾಜಪೇಯಿ ಅವರ ದೂರದೃಷ್ಟಿಯ ಫಲವಾಗಿತ್ತು. ಇವರೊಬ್ಬ ಅಪ್ರತಿಮ ಸಾಧಕರಾಗಿದ್ದರು. ಜೊತೆಗೆ ಶ್ರೇಷ್ಠ ವಾಗ್ಮಿ, ಚಿಂತಕ ಹಾಗೂ ಮಾನವತಾವಾದಿಯಾಗಿದ್ದ ಅವರು, ರಾಜಕೀಯ ವಲಯದಲ್ಲಿ ಅಜಾತ ಶತ್ರು ಎಂದೇ ಕರೆಸಿಕೊಳ್ಳುತ್ತಿದ್ದ ಮೃತರ ನಿಧನದಿಂದ ದೇಶಕ್ಕೆ ಅಪಾರ ಹಾನಿಯಾಗಿದೆ ಎಂದು ಹೇಳಿದ್ದಾರೆ.