RNI NO. KARKAN/2006/27779|Saturday, April 4, 2026
You are here: Home » breaking news » ಚಿಕ್ಕೋಡಿ:ಶೀಲ ಶಂಕಿಸಿ ಪತ್ನಿಯ ಕೊಲೆ : ಗೋವಾದಲ್ಲಿ ಆರೋಪಿಯ ಬಂಧನ

ಚಿಕ್ಕೋಡಿ:ಶೀಲ ಶಂಕಿಸಿ ಪತ್ನಿಯ ಕೊಲೆ : ಗೋವಾದಲ್ಲಿ ಆರೋಪಿಯ ಬಂಧನ 

ಶೀಲ ಶಂಕಿಸಿ ಪತ್ನಿಯ ಕೊಲೆ : ಗೋವಾದಲ್ಲಿ ಆರೋಪಿಯ ಬಂಧನ

ಚಿಕ್ಕೋಡಿ ಅ 13 : ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಗ್ರಾಮದ ಹೊರವಲಯದಲ್ಲಿ ಶವ ಬಿಸಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಗೋವಾ ರಾಜ್ಯದ ಪಣಜಿ ನಗರದ ಮಾರಮಾರಿ ಠಾಣೆ ಪೊಲೀಸರು ಆರೋಪಿ ದಿನೇಶ ಪಾಟೀಲ(39) ನನ್ನು  ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈತ ಪತ್ನಿ ದಿಯಾ ಪಾಟೀಲಳ ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಕರಗಾಂವ ಪಟ್ಟಣದ ಹೊರವಲಯದಲ್ಲಿ ಶವ ಬಿಸಾಕಿದ್ದ ಎನ್ನಲಾಗುತ್ತಿದೆ. ಪತ್ನಿಯ ಕೊಲೆ ಬಳಿಕ ಗೋವಾದಲ್ಲಿ ತಲೆಮರೆಸಿಕೊಂಡಿದ್ದ ದಿನೇಶ್​ ಸಂಬಂಧಿಕರಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ. 
ಈ ವಿಷಯ ತಿಳಿದ  ಗೋವಾ ಪೊಲೀಸರು ಕರ್ನಾಟಕ ಪೊಲೀಸರಿಗೆ ದಿನೇಶ ಕುರಿತಾದ ಮಾಹಿತಿ ನೀಡಿದ್ದರು. ಬಳಿಕ ಸದಲಗಾ ಠಾಣೆ ಪೊಲೀಸರ ಮಾಹಿತಿ ಮೇರೆಗೆ ಗೋವಾದಲ್ಲಿ ದಿನೇಶ್​ನನ್ನು ಬಂಧಿಸಲಾಗಿದೆ. ನಿನ್ನೆ ಸದಲಗಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ದಿನೇಶ ಮತ್ತು ದಿಯಾ ದಂಪತಿ ಇಚಲಕರಂಜಿ ಪಟ್ಟಣ ನಿವಾಸಿಗಳಾಗಿದ್ದಾರೆ.

Related posts: