RNI NO. KARKAN/2006/27779|Sunday, February 15, 2026
You are here: Home » breaking news » ಖಾನಾಪುರ:ಅನಾರೋಗ್ಯದಿಂದ ಖಾನಾಪುರದ ಯೋಧನ ಸಾವು

ಖಾನಾಪುರ:ಅನಾರೋಗ್ಯದಿಂದ ಖಾನಾಪುರದ ಯೋಧನ ಸಾವು 

ಅನಾರೋಗ್ಯದಿಂದ ಖಾನಾಪುರದ ಯೋಧನ ಸಾವು

ಖಾನಾಪುರ ಅ 11: ಖಾನಾಪುರ ತಾಲೂಕಿನ ಬೀಡಿ ಸಮೀಪದ ಕಸಮಳಗಿ ಗ್ರಾಮದ ಯೋಧ ಮೌಲಾಲಿ ಪಾಟೀಲ (೪೦) ಕಳೆದ ಸುಮಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗೆಂದು ಪುಣೆಯ ಮಿಲಿಟರಿ ಹಾಸ್ಪಿಟಲ ಗೆ ದಾಖಲಿಸಿದ್ದಾದರು ಚಿಕಿತ್ಸೆ ಫಲಕಾರಿಯಾಗದೆ ೧೦-೦೪-೨೦೧೮ರ ಬೆಳಗಿನ ಜಾವ ೫ಗಂಟೆಗೆ ಕೊನೆಯುಸಿರೆಳೆದರು.

ಮೃತ ಯೋಧನು ಕಳೆದ ೨೧ವರ್ಷದಿಂದ ಸೇನೆಯಲ್ಲಿ ಸೇವೆಸಲ್ಲಿಸುತ್ತಿದ್ಧರು. ಕಳೆದ ವರ್ಷದಿಂದ ಪಶ್ಚಿಮ ಬಂಗಾಳದ ಪಾನಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಮೃತ ಯೋಧನಿಗೆ ಪತ್ನಿ, ‌ಒರ್ವ ಪುತ್ರ, ತಂದೆ, ತಾಯಿ‌ ಮತ್ತು ಮೂವರು ಸಹೋದರರು ಇದ್ದಾರೆ.

ಇಂದು ಬೆಳಗಿನ ಜಾವ ೮ಗಂಟೆಗೆ ಮೃತ ಯೋಧನ ಪಾರ್ಥಿವ ಶರೀರ ಸ್ವಗ್ರಾಮವಾದ ಕಸಮಳಗಿಗೆ ಆಗಮಿಸಿದ್ದು, ೧೦ಗಂಟೆಗೆ ಸರಕಾರಿ ಗೌರವ ವಂದನೆ ಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

Related posts: